Publish Date: Wed, 29 Aug 2018 (09:33 IST)
Updated Date: Wed, 29 Aug 2018 (09:35 IST)
ಹೈದರಾಬಾದ್: ತೆಲಂಗಾಣದ ಆನೆಪರ್ತಿ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಟ ನಂದಮೂರಿ ಹರಿಕೃಷ್ಣ ಸಾವನ್ನಪ್ಪಿದ್ದಾರೆ.
ಪ್ರಯಾಣಿಸುತ್ತಿದ್ದ ಕಾರು ಹರಿಕೃಷ್ಣ ಎದುರು ಸಂಚರಿಸುತ್ತಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಎನ್ ಟಿಆರ್ ಪುತ್ರ ಹರಿಕೃಷ್ಣ ತಲೆಗೆ ತೀವ್ರ ಗಾಯವಾಗಿದೆ.
ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಹರಿಕೃಷ್ಣ ಅವರೇ ಕಾರು ಚಲಾಯಿಸುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಿನಿಮಾ ಕ್ಷೇತ್ರವಲ್ಲದೆ, ರಾಜಕೀಯದಲ್ಲೂ ಹೆಸರು ಮಾಡಿದ್ದ ಹರಿಕೃಷ್ಣ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸಂಬಂಧಿಯೂ ಆಗಿದ್ದರು. 1964 ರಲ್ಲಿ ಶ್ರೀ ಕೃಷ್ಣಾವತರಾಂ ಸಿನಿಮಾ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದ್ದ ಹರಿಕೃಷ್ಣ ಲಾಹಿರಿ ಲಾಹಿರಿ ಲಾಹಿರಿಲೊ, ಸೀತಯ್ಯ ಸೇರಿದಂತೆ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.