Publish Date: Tue, 30 Jan 2018 (09:13 IST)
Updated Date: Tue, 30 Jan 2018 (09:16 IST)
ಬೆಂಗಳೂರು: ಚುನಾವಣೆ ಬಂತೆಂದರೆ ಸಿನಿಮಾ ನಟರೂ ಚುರುಕಾಗುತ್ತಾರೆ. ರಾಜಕೀಯ ಪಕ್ಷಗಳೊಂದಿಗೆ ಸೇರಿಕೊಂಡು ಪ್ರಚಾರಕ್ಕೆ ತೊಡಗುತ್ತಾರೆ. ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ರಾಜ್ಯದಲ್ಲಿ ಪ್ರಚಾರಕ್ಕೆ ಬರುತ್ತಾರೆಂಬ ಸುದ್ದಿಗಳಿತ್ತು.
ಅದೀಗ ನಿಜವಾಗಿದೆ. ಪವನ್ ತಾವು ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಬರುವುದಾಗಿ ಘೋಷಿಸಿದ್ದಾರೆ. ಹಿಂದೂಪುರದಲ್ಲಿ ತಮ್ಮ ಜನ ಸೇನಾ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಜನಪರ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.
ಈ ಮೊದಲು ಪವನ್ ಜತೆ ಪ್ರಚಾರ ನಡೆಸುವ ಕುರಿತಂತೆ ಮಾತುಕತೆ ನಡೆಸಿರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದರು. ಇದೀಗ ಪವನ್ ಸ್ವತಃ ಗಡಿ ಭಾಗದ ಜಿಲ್ಲೆಗಳಲ್ಲಿ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಆದರೆ ಯಾರ ಪರ ಎಂದು ಹೇಳಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ