Select Your Language

Notifications

webdunia
webdunia
webdunia
webdunia

ಮಧ್ಯಪ್ರದೇಶ ಚುನಾವಣೆ ಟಿಕೆಟ್ ಬೇಕಾ? ಹಾಗಿದ್ದರೆ ಈ ಕಂಡೀಷನ್ ಗೆ ಒಪ್ಪಲೇಬೇಕು!

ಮಧ್ಯಪ್ರದೇಶ ಚುನಾವಣೆ ಟಿಕೆಟ್ ಬೇಕಾ? ಹಾಗಿದ್ದರೆ ಈ ಕಂಡೀಷನ್ ಗೆ ಒಪ್ಪಲೇಬೇಕು!
ನವದೆಹಲಿ , ಮಂಗಳವಾರ, 4 ಸೆಪ್ಟಂಬರ್ 2018 (07:07 IST)
ನವದೆಹಲಿ: ಇತ್ತೀಚೆಗೆ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳ ಬಗ್ಗೆ ಹೆಚ್ಚು ಗಮನಕೊಡುತ್ತಿವೆ. ಆದರೆ ಮಧ್ಯಪ್ರದೇಶ ಕಾಂಗ್ರೆಸ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದೆ.

ಮಧ್ಯಪ್ರದೇಶದಲ್ಲಿ ಮುಂಬರುವ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಕನಿಷ್ಠ 15 ಸಾವಿರ ಲೈಕ್ಸ್ ಮತ್ತು ಟ್ವಿಟರ್ ನಲ್ಲಿ ಕನಿಷ್ಠ 5000 ಹಿಂಬಾಲಕರು ಹೊಂದಿರಬೇಕಂತೆ!

ಹೀಗಂತ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ತನ್ನ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಖಡಕ್ ಸಂದೇಶ ಕೊಟ್ಟಿದೆ. ಇದಕ್ಕೆ ತನ್ನ ಟಿಕೆಟ್ ಆಕಾಂಕ್ಷಿಗಳಿಗೆ ಪಕ್ಷ ಸೆಪ್ಟೆಂಬರ್ 15 ರ ಗಡುವು ವಿಧಿಸಿದೆ. ಈ ದಿನಾಂಕದೊಳಗೆ ಟಿಕೆಟ್ ಆಕಾಂಕ್ಷಿಗಳು ತಮ್ಮ ಸೋಷಿಯಲ್ ಮೀಡಿಯಾ ಜನಪ್ರಿಯತೆ ಹೆಚ್ಚು ಮಾಡಿಕೊಂಡಿರಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಕಾರ್ಯಕರ್ತರಿಂದ ಎಸ್ಡಿಪಿಐ ಕಾರ್ಯಕರ್ತರ ಮೇಲೆ ಹಲ್ಲೆ?