Publish Date: Mon, 27 Aug 2018 (08:34 IST)
Updated Date: Mon, 27 Aug 2018 (08:38 IST)
ಅಸ್ಸಾಂ: ಒಬ್ಬೊಬ್ಬರೇ ನಕಲಿ ಬಾಬಾಗಳ ಅಸಲಿ ಬಣ್ಣ ಇದೀಗ ಬಯಲಾಗುತ್ತಿದೆ. ಅಸ್ಸಾಂನಲ್ಲೊಬ್ಬ ಕಿಸ್ ಮಾಡಿ ರೋಗ ಗುಣಪಡಿಸುತ್ತೇನೆಂದು ಸ್ವಯಂ ಘೋಷಿತ ದೇವ ಮಾನವನಂತೆ ಮೆರೆಯುತ್ತಿದ್ದ ಖದೀಮ ಇದೀಗ ಕಂಬಿ ಎಣಿಸುತ್ತಿದ್ದಾನೆ.
ರಾಮ್ ಪ್ರಕಾಶ್ ಚೌಹಾನ್ ಅಲಿಯಾಸ್ ಚಮತ್ಕಾರಿ ಬಾಬಾ ತಾನು ಮಹಿಳೆಯರ ಸಮಸ್ಯೆ ಬಗೆ ಹರಿಸುವುದಾಗಿ ಸೋಗು ಹಾಕಿ ಅವರನ್ನು ತಬ್ಬಿ, ಮುತ್ತು ಕೊಡುತ್ತಿದ್ದ. ಇದು ಚಮತ್ಕಾರಿ ಚುಂಬನ ಎಂದೂ ನಂಬಿಸುತ್ತಿದ್ದ.
ತನಗೆ ಭಗವಾನ್ ವಿಷ್ಣುವಿನ ಪ್ರೇರಣೆಯಿಂದ ಈ ಶಕ್ತಿ ಪ್ರಾಪ್ತಿಯಾಗಿದೆ ಎಂದು ಆತ ಮಹಿಳೆಯರ ಜತೆ ಚೆಲ್ಲಾಟವಾಡುತ್ತಿದ್ದ. ಈತ ತನ್ನ ಮನೆಯಲ್ಲಿ ಕೋಣೆಯೊಂದನ್ನು ಈ ರೀತಿ ‘ಚಿಕಿತ್ಸೆ’ಗಾಗಿಯೇ ಮೀಸಲಿಟ್ಟಿದ್ದನಂತೆ. ಈತನ ಕೃತ್ಯಕ್ಕೆ ಈತನ ತಾಯಿಯೇ ಬೆಂಬಲವಾಗಿದ್ದಳಂತೆ! ಈಗ ಈಕೆಯನ್ನೂ ತನಿಖೆಗೊಳಪಡಿಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.