Publish Date: Mon, 27 Aug 2018 (08:30 IST)
Updated Date: Mon, 27 Aug 2018 (08:32 IST)
ನವದೆಹಲಿ: ನಿನ್ನೆ ರಾಖಿ ಹಬ್ಬದ ಸಂಭ್ರಮ. ತನ್ನ ಸಹೋದರ ಸಂಬಂಧಿಗಳಿಗೆ ರಾಖಿ ಕಟ್ಟಲು ರಾಖಿ ಖರೀದಿಸಿ ಮರಳುತ್ತಿದ್ದ ಯುವತಿ ಹೆಣವಾಗಿ ಮರಳಿದ್ದಾಳೆ.
ಇದು ನಡೆದಿರುವುದು ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ. ಪ್ರಿಯಾಂಕ ಕುಮಾರಿ ಎಂಬ 22 ವರ್ಷದ ಯುವತಿ ತನ್ನ ಸಹೋದರಿ ಜತೆ ರಾಖಿ ಖರೀದಿಸಿ ಮನೆಗೆ ಮರಳುತ್ತಿದ್ದಾಗ ಮುಸುಕುಧಾರಿಯೊಬ್ಬನ ಗುಂಡಿಗೆ ಜೀವ ಕಳೆದುಕೊಂಡಿದ್ದಾಳೆ.
ಮೊದಲು ಇವರ ಬಳಿಯಿದ್ದ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ ಆರೋಪಿ ವಿಫಲವಾದಾಗ, ತನ್ನ ಕೈಯಲ್ಲಿದ್ದ ರಿವಾಲ್ವರ್ ನಿಂದ ಪ್ರಿಯಾಂಕ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಪ್ರಿಯಾಂಕಳನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ. ಆರೋಪಿ ಪ್ರಿಯಾಂಕ ಬಳಿಯಿದ್ದ ಮೊಬೈಲ್ ಕಸಿದು ಪರಾರಿಯಾಗಿದ್ದಾನೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.