Publish Date: Thu, 09 Aug 2018 (09:02 IST)
Updated Date: Thu, 09 Aug 2018 (09:04 IST)
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖಾ ತಂಡ ಇನ್ನೊಬ್ಬ ಆರೋಪಿಯನ್ನು ಬಂಧಿಸಿದೆ.
ಬೆಳಗಾವಿಯ ಡಾಬಾ ಮಾಲಿಕನೊಬ್ಬನನ್ನು ಎಸ್ ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಬೆಳಗಾವಿಯ ಸಂಭಾಜಿ ಗಲ್ಲಿಯ ಡಾಬಾ ಮಾಲಿಕ ಭರತ್ ಎಂಬಾತ ಬಂಧನಕ್ಕೊಳಗಾದ ವ್ಯಕ್ತಿ.
ಗೌರಿ ಹತ್ಯೆ ಪ್ರಕರಣದ ಆರೋಪಿಗಳಾದ ಪರಶುರಾಮ್ ವಾಗ್ಮೋaರೆ ಮತ್ತು ಅಮೋಲ್ ಕಾಳೆ ಈತನ ಡಾಬಾಕ್ಕೆ ಬರುತ್ತಿದ್ದರು ಎನ್ನಲಾಗಿದ್ದು ಧರ್ಮ ಪ್ರಚಾರಕರು ಎಂಬ ಕಾರಣಕ್ಕೆ ಇವರಿಗೆ ಡಾಬಾ ಮಾಲಿಕ ಆಶ್ರಯ ನೀಡಿದ್ದನಂತೆ. ಇದೇ ಕಾರಣಕ್ಕೆ ಈಗ ಈತನನ್ನು ವಿಚಾರಣೆ ನಡೆಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.