Publish Date: Fri, 03 Aug 2018 (10:21 IST)
Updated Date: Fri, 03 Aug 2018 (10:23 IST)
ಮುಂಬೈ: ಇತ್ತೀಚೆಗೆ ಹಾಡಹಗಲೇ ಮಹಿಳೆಯರ ಮೇಲೆ ನಡುರಸ್ತೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಅಂತಹದ್ದೇ ಒಂದು ಪ್ರಕರಣ ಮುಂಬೈನಲ್ಲಿ ನಡೆದಿದೆ.
33 ವರ್ಷದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 40 ವರ್ಷದ ಯುವತಿಯ ಪ್ಯಾಂಟು ಎಳೆದಿದ್ದಲ್ಲದೆ, ಅಸಭ್ಯವಾಗಿ ವರ್ತಿಸಿದ ಪರಿಣಾಮ ಈಗ ಜೈಲು ಕಂಬಿ ಎಣಿಸುತ್ತಿದ್ದಾನೆ.
ಸ್ಕೂಟರ್ ನಲ್ಲಿ ಕುಳಿತಿದ್ದ ಆರೋಪಿ ರಾಮರಾಜ್ ಪವಾರ್ ಎಂಬಾತ ಮಹಿಳೆಯನ್ನೇ ದಿಟ್ಟಿಸುತ್ತಿದ್ದ. ನಂತರ ಆಕೆಯನ್ನೇ ಹಿಂಬಾಲಿಸಿ ಸ್ವಲ್ಪ ದೂರ ಹೋದ ಮೇಲೆ ಇದ್ದಕ್ಕಿದ್ದಂತೆ ನಡು ರಸ್ತೆಯಲ್ಲಿ ಪ್ಯಾಂಟು ಎಳೆದಿದ್ದಲ್ಲದೆ, ಮಹಿಳೆ ಕಿರುಚಿದಾಗ ಎದುರು ಬಂದು ಅಸಭ್ಯವಾಗಿ ವರ್ತಿಸಿದ.
ತಕ್ಷಣ ಮಹಿಳೆ ಜೋರಾಗಿ ಕೂಗಿಕೊಂಡಾಗ ಜನ ಸೇರಿದರು. ಆದರೆ ಆರೋಪಿ ತಪ್ಪಿಸಿಕೊಂಡ. ಕೊನೆಗೆ ಪೊಲೀಸರಿಗೆ ಕರೆ ಮಾಡಲಾಯಿತು. ಪೊಲೀಸರು ತಕ್ಷಣವೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.