Publish Date: Tue, 31 Jul 2018 (10:06 IST)
Updated Date: Tue, 31 Jul 2018 (10:08 IST)
ಉಡುಪಿ: ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪೊಲೀಸರ ಕೈ ಸೇರಿದೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರ ಕಾರಣ ಉಲ್ಲೇಖವಾಗಿಲ್ಲ.
ಮರಣೋತ್ತರ ಪರೀಕ್ಷೆಯ 8 ಪುಟಗಳ ಪ್ರಾಥಮಿಕ ವರದಿ ಪೊಲೀಸರಿಗೆ ಲಭ್ಯವಾಗಿದೆ. ಈಗಿನ ವರದಿಯಲ್ಲಿ ಶ್ರೀಗಳಿಗೆ ಸಂಬಂಧಿಸಿದ ಮಾಹಿತಿ, ಎಲ್ಲೆಲ್ಲಿ ರಕ್ತಸ್ರಾವವಾಗಿತ್ತು, ಆರೋಗ್ಯ ಸ್ಥಿತಿ ಹೇಗಿತ್ತು ಎಂಬಿತ್ಯಾದಿ ವಿವರಗಳಿವೆ.
ಆದರೆ ಸಾವಿಗೆ ವಿಷಪ್ರಾಷನವೇ ಕಾರಣವೋ ಎಂಬುದು ಸ್ಪಷ್ಟವಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೈ ಸೇರಿದ ಬಳಿಕ ಎರಡನ್ನೂ ವಿಶ್ಲೇಷಿಸಿ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಬೇಕಷ್ಟೇ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.