Publish Date: Tue, 31 Jul 2018 (09:18 IST)
Updated Date: Tue, 31 Jul 2018 (09:20 IST)
ನವದೆಹಲಿ: ಪ್ರಧಾನಿ ಮೋದಿ ಮೇಲೆ ಕೆಮಿಕಲ್ ಬಾಂಬ್ ದಾಳಿಯಾಗಲಿದೆ ಎಂದು ಸುಳ್ಳು ಕರೆ ಮಾಡಿದ ಯುವಕನೋರ್ವನನ್ನು ಮುಂಬೈಯಲ್ಲಿ ಬಂಧಿಸಲಾಗಿದೆ.
ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ 27 ವರ್ಷದ ವ್ಯಕ್ತಿ ಕಾಶಿನಾಥ್ ಮಂಡಲ್ ಎಂದು ಈತನನ್ನು ಗುರುತಿಸಲಾಗಿದೆ. ಜುಲೈ 27 ರಂದು ಈತನನ್ನು ಬಂಧಿಸಲಾಗಿದೆ.
ನವದೆಹಲಿಯ ಎನ್ ಎಸ್ ಜಿ ಕಚೇರಿಯ ಫೋನ್ ನಂಬರ್ ಪಡೆದಿದ್ದ ಈತ ಅಲ್ಲಿಗೆ ಕರೆ ಮಾಡಿ ಪ್ರಧಾನಿ ಮೋದಿ ಮೇಲೆ ರಾಸಾಯನಿಕ ಬಾಂಬ್ ದಾಳಿಯಾಗಲಿದೆ ಎಂದು ಸುಳ್ಳು ಎಚ್ಚರಿಕೆ ನೀಡಿದ್ದ. ಕರೆಯ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದ್ದು, ಮುಂಬೈಯಲ್ಲಿದ್ದ ಈತನನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.