Publish Date: Fri, 27 Jul 2018 (14:15 IST)
Updated Date: Fri, 27 Jul 2018 (14:18 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಇದೀಗ 19 ವರ್ಷದ ಯುವತಿಯೊಬ್ಬಳ ಅದೃಷ್ಟವೇ ಬದಲಾಗಿದೆಯಂತೆ.
ಹೌದು. ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಜುಲೈ 16 ರಂದು ನರೇಂದ್ರ ಮೋದಿ ರ್ಯಾಲಿ ನಡೆಸಿದ್ದರು. ಆಗ ವಿದ್ಯಾರ್ಥಿನಿ ಗೀತಾ ಹಾಗೂ ಕುಟುಂಬಸ್ಥರು ಪ್ರಧಾನಿ ಮೋದಿ ಅವರ ಭಾಷಣ ಕೇಳಲು ಮಿಡ್ನಾಪುರ್‌ಗೆ ತೆರಳಿದ್ದರು. ಈ ಸಂದರ್ಭದಲ್ಲಿ ಒಂದು ಭಾಗದ ಪೆಂಡಾಲ್ ಕುಸಿದು ಬಿದ್ದಿತ್ತು. ಈ ಘಟನೆಯಲ್ಲಿ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಅದರಲ್ಲಿ ಗೀತಾ ಕೂಡ ಒಬ್ಬಳು. ಘಟನೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಮೋದಿ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಗೀತಾ ಪ್ರಧಾನಿ ಮೋದಿ ಅವರ ಬಳಿ ಆಟೋಗ್ರಾಫ್ ಕೇಳಿದ್ದಳು. ಗೀತಾಗೆ ಆಟೋಗ್ರಾಫ್ ನೀಡಿದ್ದ ಮೋದಿ ಗೀತಾ ನೀನು ಖುಷಿಯಾಗಿರು ಎಂದಿದ್ದರು.
ಮೋದಿ ಅವರ ಹಸ್ತಾಕ್ಷರ ಬೀಳ್ತಿದ್ದಂತೆ ಗೀತಾ ಅದೃಷ್ಟ ಬದಲಾಗಿದೆಯಂತೆ. ಸೆಲೆಬ್ರಿಟಿ ರೀತಿಯಲ್ಲಿ ಗೀತಾಳನ್ನು ನೋಡ್ತಾರಂತೆ. ಆಕೆಯನ್ನು ಮದುವೆಯಾಗಲು ಹಲವರು ಮುಂದೆ ಬಂದಿದಾರಂತೆ. ‘ಈ ಹಿಂದೆ ಒಂದು ಸಂಬಂಧ ನೋಡಲಾಗಿದ್ದು, ಅವ್ರು 1 ಲಕ್ಷ ರೂಪಾಯಿ ವರದಕ್ಷಿಣೆ ಕೇಳಿದ್ದಾರೆ. ಆದ್ರೀಗ ವರದಕ್ಷಿಣೆಯಿಲ್ಲದೆ ಮದುವೆಯಾಗಲು ಕೆಲ ಹುಡುಗರು ಆಸಕ್ತಿ ತೋರಿದ್ದಾರೆ. ಆದರೆ ಮೊದಲು ಓದು ಮುಗಿಸಿ ನಂತರ ಮದುವೆಯಾಗುತ್ತೇನೆ’ ಎನ್ನುತ್ತಾಳೆ ಗೀತಾ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ