Select Your Language

Notifications

webdunia
webdunia
webdunia
webdunia

ಶೀರೂರು ಶ್ರೀಗಳ 3 ಕೆಜಿ ಚಿನ್ನಾಭರಣ ನಾಪತ್ತೆ?

ಶೀರೂರು ಶ್ರೀಗಳ 3 ಕೆಜಿ ಚಿನ್ನಾಭರಣ ನಾಪತ್ತೆ?
ಉಡುಪಿ , ಬುಧವಾರ, 25 ಜುಲೈ 2018 (17:37 IST)
ಸುಮಾರು 3 ಕೆಜಿಯಷ್ಟು ಚಿನ್ನಾಭರಣವನ್ನು ಶೀರೂರು ಶ್ರೀಗಳು ಹೊಂದಿದ್ದರು. ಆದರೆ ಅವರ ನಿಧನದ ಬಳಿಕ ಅವುಗಳೆಲ್ಲವೂ ನಿಗೂಢವಾಗಿ ನಾಪತ್ತೆಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಯಾರ ಕೈಯಲ್ಲಿದೆ ಅನ್ನೋ ಪ್ರಶ್ನೆಯೂ ಎದುರಾಗಿದೆ. ಇದ್ರ ಹಿಂದೆ ರಮ್ಯಾ ಶೆಟ್ಟಿ ಕೈವಾಡದೆಯೇ ಅನ್ನೋ ಬಗ್ಗೆ ಕುತೂಹಲ ಮೂಡಿದೆ.

ಶೀರೂರು ಶ್ರೀಗಳ ನಿಗೂಢ ಸಾವಾಗಿ ವಾರ ಕಳೆದರೂ ಯಾರೊಬ್ಬರ ಬಂಧನವಾಗಿಲ್ಲ. ಶೀರೂರು ಶ್ರೀಗಳ ಅನುಮಾನಸ್ಪದ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಹಲವು ಸುಳಿವುಗಳು ಸಿಕ್ಕಿದೆ. ಕಳೆದುಹೋದ ಸಿಸಿಟಿವಿ ಡಿವಿಆರ್ ಇಂದು ನದಿಯಲ್ಲಿ ಪತ್ತೆಯಾಗಿತ್ತು. ಸ್ವಾಮೀಜಿಗೆ ಸೇರಿದ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಕಳೆದುಹೋಗಿದೆ ಎಂದು ತಿಳಿದುಬಂದಿದೆ. ಸುಮಾರು 3 ಕೆಜಿಯಷ್ಟು ಚಿನ್ನಾಭರಣವನ್ನು ಶ್ರೀಗಳು ಹೊಂದಿದ್ದರು. ಆದರೆ ಅವರ ನಿಧನದ ಬಳಿಕ ಅವುಗಳೆಲ್ಲವೂ ನಿಗೂಢವಾಗಿ ನಾಪತ್ತೆಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಯಾರ ಕೈಯಲ್ಲಿದೆ ಅನ್ನೋ ಪ್ರಶ್ನೆಯೂ ಎದುರಾಗಿದೆ. ಇದ್ರ ಹಿಂದೆ ರಮ್ಯಾ ಶೆಟ್ಟಿ ಕೈವಾಡದೆಯೇ ಅನ್ನೋ ಬಗ್ಗೆ ಕುತೂಹಲ ಮೂಡಿದೆ.

ಪೊಲೀಸರು ರಮ್ಯಾ ಶೆಟ್ಟಿ ಹಾಗೂ ಅವರ ಸ್ನೇಹಿತನನ್ನು ನಿನ್ನೆ ವಿಚಾರಣೆಗೊಳಪಡಿಸಿದ್ದಾರೆ. ಸದ್ಯ ಪೊಲೀಸ್ ವಶದಲ್ಲಿರುವ ರಮ್ಯಾ ಶೆಟ್ಟಿ ಗೆಳೆಯ ಇಕ್ಬಾಲ್ ಶೇಖ್ ಮನ್ಸೂರ್ ಮೂಲತಃ ಉಡುಪಿಯ ಕಾಪು ನಿವಾಸಿಯಾಗಿದ್ದು, ಮುಂಬೈ ಸಂಪರ್ಕದಿಂದಾಗಿ ರಮ್ಯಾ ಶೆಟ್ಟಿ ಪರಿಚಯವಾಗಿತ್ತು.

ಶಿರೂರು ಮೂಲಮಠದಲ್ಲಿ ನಾಪತ್ತೆಯಾಗಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆ ಹಿಂದೆಯೂ ಈತನ ಕೈವಾಡವಿರುವ ಬಗ್ಗೆ ತನಿಖೆ ನಡೆಸಲಾಗಿದೆ. ವಿಚಾರಣೆ ವೇಳೆ ಈತ ಸಿಸಿಟಿವಿ ಡಿವಿಆರ್ ಕದ್ದೊಯ್ದು ನದಿಗೆ ಎಸೆದಿರುವ ಬಗ್ಗೆ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ. ಇದ್ರ ಜಾಡು ಹಿಡಿದ ಪೊಲೀಸರು ನದಿಯಲ್ಲೆಲ್ಲಾ ಹುಡುಕಾಡಿ, ಇಂದು ಮುಂಜಾನೆ ವೇಳೆ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರನ್ನೇ ಅಡ್ಡಗಟ್ಟಿ ದರೋಡೆಗೆ ಯತ್ನ..!