Publish Date: Wed, 25 Jul 2018 (16:24 IST)
Updated Date: Wed, 25 Jul 2018 (16:27 IST)
ಪೊಲೀಸರನ್ನೇ ಅಡ್ಡಗಟ್ಟಿ ದರೋಡೆಗೆ ಯತ್ನ ನಡೆಸಿರುವ ಘಟನೆ ನಡೆದಿದೆ. ವಾಹನ ಸವಾರರನ್ನು ತಡೆದು ದರೋಡೆ ಮಾಡುತ್ತಿದ್ದ ಕಳ್ಳರ ವಿಷಯ ಅರಿತ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರ ವಾಹನವನ್ನೇ ಹತ್ತು ಜನ ದರೋಡೆಕೋರರು ಅಡ್ಡಗಟ್ಟಿದರು. ಮುಂದೇನಾಯ್ತು… ಓದಿ…
ಪೊಲೀಸರನ್ನೇ ಅಡ್ಡಗಟ್ಟಿ ದರೋಡೆಗೆ ಯತ್ನ ನಡೆಸಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಬಳಿ ನಡೆದ ಘಟನೆ ಇದಾಗಿದೆ. ಮದ್ಯರಾತ್ರಿ 2 ಗಂಟೆಗೆ ನಡೆದ ಘಟನೆ ಇದಾಗಿದ್ದು, ವಾಹನ ಸವಾರರನ್ನು ತಡೆದು ಕಳ್ಳರು ದರೋಡೆ ಮಾಡುತ್ತಿದ್ದರು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರ ವಾಹನವನ್ನೇ ಅಡ್ಡಗಟ್ಟಿದ ದರೋಡೆಕೋರರು, ಆ ಬಳಿಕ ಪೊಲೀಸರನ್ನ ಕಂಡು ಪರಾರಿಯಾಗಲು ಯತ್ನಿಸಿದರು.
ದರೋಡೆಕೋರರಾದ 10 ಮಂದಿಯಲ್ಲಿ ಹೆಬ್ಬಳಗೆರೆ ಗ್ರಾಮದ ಯತೀಶ್ ನ ಬಂಧನವಾಗಿದೆ. ಚಿತ್ರದುರ್ಗ - ಶಿವಮೊಗ್ಗ ರಸ್ತೆಯಲ್ಲಿ ವಾಹನ ಸವಾರರನ್ನು ದರೋಡೆ ಮಾಡುತ್ತಿದ್ದ ತಂಡ ಇದಾಗಿದೆ. ಬಂಧಿತರಿಂದ ಬ್ಯಾಟರಿ. ಕಾರದಪುಡಿ. ಚಾಕು ಸೇರಿದಂತೆ ಮಾರಾಕಾಸ್ತ್ರಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.