Publish Date: Mon, 23 Jul 2018 (15:34 IST)
Updated Date: Mon, 23 Jul 2018 (15:36 IST)
ಗೂಡ್ಸ್, ಟ್ರಾಕ್ಟರ್, ಲಾರಿಯಲ್ಲಿ ದನಗಳನ್ನು ಕದ್ದೊಯ್ಯುವುದನ್ನು ಕಂಡಿದ್ದೀರಿ, ಕೇಳಿದ್ದೀರಿ, ಆದರೆ ಹೈಟೆಕ್ ಕಾರ್ ಆದ ಇನ್ನೋವಾದಲ್ಲಿ ದನಕರುಗಳನ್ನು ಭೂಪರೊಬ್ಬರು ಕದ್ದಿದ್ದಾರೆ. ಅದೂ ಬಿಡಾಡಿ ಜಾನುವಾರುಗಳನ್ನು ಎಂದರೆ ನಂಬಲೇಬೇಕು. ಇದು ಯಾವ ಊರಿನಲ್ಲಿ ಅಂತೀರಾ? ಮುಂದೆ ಓದಿ.
ಬೀಡಾಡಿ ಆಕಳನ್ನು ಮಧ್ಯರಾತ್ರಿ ಇನ್ನೋವಾ ಕಾರಲ್ಲಿ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೋವಾ ಕಾರಲ್ಲಿ ಆಕಳು ಕದ್ದೊಯ್ದ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ. ದಾವಣಗೆರೆಯ ವಿನೋಬನಗರದ 2 ನೇ ಕ್ರಾಸ್ ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದ ಪ್ರಕರಣ ಇದಾಗಿದೆ.
ಜು.12 ನೇ ತಾರೀಖಿನಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆಕಳು ಕಳವು ಮಾಡಲಾಗಿದೆ. ಇನ್ನೋವಾ ಕಾರಲ್ಲಿ ಬಂದು ಕಾರು ನಿಲ್ಲಿಸಿಕೊಂಡು ಒಂದು ಆಕಳನ್ನು ಡಿಕ್ಕಿಯಲ್ಲಿ ತುಂಬಿಕೊಂಡು ಹೋದ ಕಳ್ಳರ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಸಾಯಿ ಖಾನೆಗೆ ಮಾರಾಟ ಮಾಡಲು ಕದ್ದೊಯ್ದ ಕಳ್ಳರು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಅಕಳನ್ನು ಇಬ್ಬರು ವ್ಯಕ್ತಿಗಳು ಕಾರಲ್ಲಿ ತುಂಬಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ.