ಪಟ್ಟದ ದೇವರನ್ನು ಹಿಂದಿರುಗಿಸುವ ವಿಚಾರಕ್ಕೆ ಸಂಬಂಧಿಸಿದ 6 ಮಠಾಧೀಶರ ವಿರುದ್ಧ ಶೀರೂರು ಶ್ರೀಗಳು ಸಲ್ಲಿಸಿದ್ದ ಕೇವಿಯಟ್ ಅನೂರ್ಜಿತಗೊಂಡಿದೆ. ಕೇವಿಯಟ್ಗೆ 90 ದಿನಗಳ ಕಾಲಾವಕಾಶವಿದ್ದು, ಈ ಅವಧಿಯಲ್ಲಿ ಶಿರೂರು ಶ್ರೀ ಹಾಗೂ ಅವರ ಮಠದ ವಿರುದ್ಧ ಯಾರೂ ಮಾತನಾಡಬಾರದು. ಮತ್ತು ಶಿಷ್ಯ ಸ್ವೀಕಾರಕ್ಕಾಗಿ ಯಾರೂ ಒತ್ತಾಯ ಮಾಡುವಂತಿಲ್ಲ ಎಂದು ಹೆಳಲಾಗಿತ್ತು.
ಪಟ್ಟದ ದೇವರನ್ನು ಕೊಡದಿದ್ದರೆ ಮಠಾಧೀಶರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಶೀರೂರು ಶ್ರೀಗಳು ತಿಳಿಸಿದದ್ದರು. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ಬುಧವಾರ ಬರುವುದಕ್ಕಾಗಿ ನ್ಯಾಯವಾದಿ ರವಿ ಕಿರಣ ಮುರುಡೇಶ್ವರ್ ಅವರಿಗೆ ಶೀರೂರು ಶ್ರಿಗಳು ತಿಳಿಸಿದ್ದರು. ಆದ್ರೆ ಶೀರೂರು ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ. ಇದೀಗ ಶೀರೂರು ಶ್ರೀಗಳ ಸಾವಿನಿಂದಾಗಿ ಸಹಜವಾಗಿಯೇ ಕೇವಿಯಟ್ ಅರ್ಜಿ ಅನೂರ್ಜಿತಗೊಂಡಿದೆ.