Select Your Language

Notifications

webdunia
webdunia
webdunia
webdunia

ಅನೈತಿಕ ಸಂಭಂದಕ್ಕೆ ಮಗನನ್ನು ಬಲಿ ಕೊಟ್ಟ ಪಾಪಿ ತಾಯಿ

ಅನೈತಿಕ ಸಂಭಂದಕ್ಕೆ ಮಗನನ್ನು ಬಲಿ ಕೊಟ್ಟ ಪಾಪಿ ತಾಯಿ
, ಭಾನುವಾರ, 22 ಜುಲೈ 2018 (20:08 IST)
ತಾಯಿ ಅಂದರೆ ತ್ಯಾಗಮಹಿ ಮಕ್ಕಳಿಗೋಸ್ಕರ ಸರ್ವಸ್ವ ತ್ಯಾಗ ಮಾಡುವ  ಕರುಣಾಮಹಿ ಅಂತೆಲ್ಲಾ, ತಾಯಿಗೆ ಉನ್ನತ ಸ್ಥಾನವನ್ನು ನೀಡಿರುವುದು ನಮ್ಮ ಸಂಪ್ರದಾಯ. ಆದರೆ ಇಲ್ಲೊಬ್ಬ ತಾಯಿ ಕೇವಲ ತನ್ನ ಕಾಮದ ಆಸೆ ತೀರಿಸಿಕಳ್ಳುವುದಕ್ಕೋಸ್ಕರ   ತನ್ನ ಒಡಲಲ್ಲಿ ಜನಿಸಿದ ಕಂದಮ್ಮನನ್ನು  ಕತ್ತು ಹಿಸುಕಿ ಕೊಲೆ ಮಾಡಿ. ತಾಯಿ ಅನ್ನುವ ಪವಿತ್ರ ಪದಕ್ಕೆ  ಮಸಿ  ಬಳಿಯುವ ಕೆಲಸ ಮಾಡಿರುವ ಘಟನೆ  ನಡೆದಿದೆ.  

 
ಚಿಕ್ಕಬಳ್ಳಾಪುರದಲ್ಲಿ ತಾಯಿಯೊಬ್ಬಳು ತನ್ನ ಅನೈತಿಕ ಸಂಬಂಧ ಮರೆಮಾಚುವ ನಿಟ್ಟಿನಲ್ಲಿ ಹೆತ್ತ ಮಗನನ್ನೆ ಕೊಲೆ ಮಾಡಿರುವ ಘಟನೆ ನಡೆದಿದೆ. ಪ್ರಕಾಶ್ ಮತ್ತು ಭವಾನಿ ಅಲಿಯಾಸ್ ಸುಕನ್ಯ ಎಂಬುವರಿಗೆ ಮದುವೆಯಾಗಿ ಹತ್ತು ವರ್ಷಗಳು ಕಳೆದಿರುತ್ತದೆ. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಗಂಡುಮಕ್ಕಳಿವೆ. ಒಬ್ಬ ಮಗ ಪುನೀತ್ 9 ವರ್ಷ, ಸುದೀಪ್ 6 ವರ್ಷದ ಮಕ್ಕಳಿದ್ದಾರೆ.  ಪ್ರಕಾಶ್ ರವರು  ಸಪ್ತಗಿರಿ ಎಂಬ ಖಾಸಗಿ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾರೆ. ಆದರೆ  ಭವಾನಿ ಅಲಿಯಾಸ್ ಸುಕನ್ಯ ಹೆಚ್ಚಿನ ಸಂಪಾದನೆಗೋಸ್ಕರ  ಗಾರೆಕೆಲಸ ಮಾಡಲು ಮೂರ್ತಿ ಎಂಬಾತನ ಜೊತೆಯಲ್ಲಿ ಹೋಗುತ್ತಿರುತ್ತಾಳೆ.

ಸುಕನ್ಯ ಮೂರ್ತಿಯ ಜೊತೆ ಅನೈತಿಕ  ಸಂಭಂದ ಬೆಳಸಿಕೊಂಡು ಗೌಪ್ಯವಾಗಿ ನಡೆಸಿಕೊಂಡು ಬಂದಿರುತ್ತಾಳೆ. ಒಂದು ದಿನ ಗಂಡ ಇಲ್ಲದೆ ಇರುವ ಸಮಯ ನೋಡಿಕೊಂಡು ತನ್ನ ಪ್ರಿಯಕರ ಮೂರ್ತಿಯನ್ನು ಮನೆಗೆ ಕರೆಸಿಕೊಂಡು  ತನ್ನ ಕಾಮದ ಚೆಲ್ಲಾಟದಲ್ಲಿ ತೊಡಗಿರುವ ದೃಶ್ಯವನ್ನು ಕಣ್ಣಾರೆ ಕಂಡ ತನ್ನ ಎರಡನೇ ಮಗ ಸದೀಪ್ ನನ್ನು  ತನ್ನ ಅಕ್ರಮ ಸಂಭಂದಿ ಮೂರ್ತಿ ಯೊಂದಿಗೆ ಸೇರಿ ಕತ್ತು ಹಿಸುಕಿ ಉಸಿರುಗಟ್ಟಿಸಿ  ಸಾಯಿಸಿಯೇ ಬಿಟ್ಟಿದ್ದಾರೆ.  ಈ ಕುರಿತು ಚಿಂತಾಮಣಿ  ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತನಿಖೆ ಕೈಗೆತ್ತಿಕೊಂಡ ಚಿಂತಾಮಣಿ  ನಗರ ಪೊಲೀಸ್ ಇನ್ಸ್ಪೆಕ್ಟರ್ ಪಿ ಬಿ ಹನುಮಂತಪ್ಪ ಮತ್ತು  ಶಿಡ್ಲಘಟ್ಟ  ಗ್ರಾಮಾಂತರ ಠಾಣೆಯ ಸಭ್ ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ವಿರುದ್ಧ ಹೆಗೆಡೆ ವಾಗ್ದಾಳಿ