ಶೀರೂರು ಸ್ವಾಮೀಜಿ ಸಂಶಯಾಸ್ಪದ ಸಾವು ಹಿನ್ನೆಲೆಯಲ್ಲಿ, ಸ್ವಾಮೀಜಿ ಸಹೋದರ ನೀಡಿದ ದೂರಿನನ್ವಯ ತನಿಖೆ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ಬಿ. ನಿಂಬರಗಿ ಹೇಳಿದ್ದಾರೆ.
ಶ್ರೀಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸ್ವಾಮೀಜಿ ಸಹೋದರ ಲಾಥವ್ಯ ಆಚಾರ್ಯ ಅವರು ದೂರು ದಾಖಲಿಸಿದ್ದಾರೆ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಮರಣೋತ್ತರ ಪರೀಕ್ಷೆ, ಎಫ್ಎಸ್ಎಲ್ ವರದಿ ಬಳಿಕ ಏನಾಗುತ್ತೆ ನೋಡ್ಬೇಕು. ಈವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ. Crpc 174c ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ತನಿಖೆಗೆ ಬೇಕಾದ ಜಾಗವನ್ನು ಮಾತ್ರ ಪೊಲೀಸ್ ಇಲಾಖೆ ಸುಪರ್ದಿಗೆ ಪಡೆದಿದ್ದೇವೆ. ದಿನನಿತ್ಯದ ಪೂಜೆ-ಪುನಸ್ಕಾರ ಹಾಗೂ ಅಲ್ಲೇ ಇದ್ದ ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಇಲ್ಲ. ಮೂಲಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.