Publish Date: Sat, 21 Jul 2018 (21:08 IST)
Updated Date: Sat, 21 Jul 2018 (21:10 IST)
ಅವರು ರೈತರು, ಹಾಲು ಉತ್ಪಾದಕರೂ ಹೌದು. ಆದರೆ ಅವರು ತಾವು ತಂದಿದ್ದ ಹಾಲನ್ನು ಹಾಲಿನ ಡೈರಿಯ ಮುಂದೆಯೇ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರು ಹಾಗೂ ಹಾಲು ಉತ್ಪಾದಕರು ಡೈರಿ ಮುಂಭಾಗದಲ್ಲಿ ಹಾಲು ಸುರಿದು ಪ್ರತಿಭಟನೆ ನಡೆಸಿದ್ದಾರೆ. ಕಡಿಮೆ ಫ್ಯಾಟ್ ಗುಣಮಟ್ಟದ ಹಾಲನ್ನು ನಿರಾಕರಿಸಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ತಾಲೂಕಿನ ಮರಿಲಿಂಗನದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ.
29 ಡಿಗ್ರಿ ಗಿಂತ ಕಡಿಮೆ ಫ್ಯಾಟ್ ಹೊಂದಿರುವ ಹಾಲನ್ನು ಹಾಕಿಸಿಕೊಳ್ಳಲು ಡೈರಿಯ ಸಿಬ್ಬಂದಿ ನಿರಾಕರಿಸಿದ್ದಾರೆ. ಹೀಗಾಗಿ ಅಸಮಧಾನಗೊಂಡ ರೈತರು ತಾವು ತಂದಿದ್ದ ಹಾಲನ್ನು ಡೈರಿಯ ಮುಂಭಾಗದಲ್ಲಿಯೇ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.