Select Your Language

Notifications

webdunia
webdunia
webdunia
webdunia

ಹಾಲು ದರ ಇಳಿಕೆ ಖಂಡಿಸಿ ಪ್ರತಿಭಟನೆ

ಹಾಲು ದರ ಇಳಿಕೆ ಖಂಡಿಸಿ ಪ್ರತಿಭಟನೆ
ಆನೇಕಲ್ , ಸೋಮವಾರ, 9 ಜುಲೈ 2018 (17:45 IST)
ಬಮೂಲ್ ಸಂಸ್ಥೆ ಹಾಲು ದರದಲ್ಲಿ 2 ರೂಪಾಯಿ ಕಡಿಮೆ ಮಾಡಿರುವುದನ್ನು ವಿರೋಧಿಸಿ ನೂರಾರು ಹಾಲು ಉತ್ಪಾದಕರು ಹಾಗೂ ಗೋ ಪಾಲಕರು ಆನೇಕಲ್ ಡೈರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಗೋಪಾಲಕರ ಅಧ್ಯಕ್ಷ ರಮೇಶ್ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ನೂರಾರು ಹಾಲು ಉತ್ಪಾದಕರು ಹಾಗೂ ಗೋ ಪಾಲಕರು ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದರು.

ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಬಮೂಲ್ ಅಧ್ಯಕ್ಷ ಬಿ.ಜಿ. ಅಂಜನಪ್ಪ ಸ್ಥಳಕ್ಕೆ ಬೇಟಿ ನೀಡಿದರು.  ಪ್ರತಿಭಟನಾ ನಿರತರ ಮನವೊಲಿಕೆ ಮಾಡಿ ಅವರನ್ನು  ಸಮಾದನ ಪಡಿಸಿದರು. ನಂತರ ಪ್ರತಿಭಟನೆ ಮಾಡುತ್ತಿದ್ದ ಹಾಲು ಉತ್ಪಾದಕರ  ಬಳಿ ಮನವಿ ಪತ್ರ ಪಡೆದ ಬಮೂಲ್ ಅಧ್ಯಕ್ಷ ಬಿ.ಜಿ.ಅಂಜಿನಪ್ಪ ಸಮಸ್ಯೆಯನ್ನು ಕೂಡಲೇ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆಗೆ ಬೆಂಕಿ ಇಟ್ಟು, ಪ್ರೇಮ ಪತ್ರ ಬರೆದಿದ್ದ ಕಿರಾತಕ ಅರೆಸ್ಟ್