Publish Date: Thu, 19 Jul 2018 (10:35 IST)
Updated Date: Thu, 19 Jul 2018 (10:36 IST)
ನವದೆಹಲಿ: ಅನೈತಿಕ ಸಂಬಂಧ ಹೊಂದಿದ್ದಾಳೆಂಬ ಅನುಮಾನದ ಮೇರೆಗೆ ಪತ್ನಿಯನ್ನೇ ಚೆನ್ನಾಗಿ ಥಳಿಸಿ, ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಸಿಎಎಫ್ ಸೈನಿಕನೊಬ್ಬ ಹತ್ಯೆ ಮಾಡಿದ್ದಾನೆ.
ರಾಯ್ಪುರದ ಭಟಾಪಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸಿಎಎಫ್ ಸುರೇಶ್ ಮಿರ್ರಿ ಎಂಬಾತ ಕೊಲೆ ಮಾಡಿದಾತ. ದಾಂತೇವಾಡ ಜಿಲ್ಲೆಯ 6 ನೇ ಬೆಟಾಲಿಯನ್ ನಲ್ಲಿ ಅಡುಗೆಯವನಾಗಿ ಈತ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
ಕೊಲೆ ಮಾಡಿದ ಬಳಿಕ ತನ್ನ ಅತ್ತೆ ಮನೆಗೆ ಪತ್ನಿಯ ಮೃತದೇಹವನ್ನು ಕೊಂಡೊಯ್ದ ಸುರೇಶ್, ಅನಾರೋಗ್ಯದಿಂದ ಮೃತಪಟ್ಟಿರುವುದಾಗಿ ನಾಟಕವಾಡಿದ್ದ. ಆದರೆ ಅನುಮಾನಗೊಂಡ ಪತ್ನಿಯ ಪೋಷಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ ಎನ್ನಲಾಗಿದೆ. ಮನೆಯ ಬಾತ್ ರೂಂನಲ್ಲಿ ಪತ್ನಿ ಬಟ್ಟೆ ಒಗೆಯುತ್ತಿದ್ದಾಗ ಸುರೇಶ್ ಈ ಕೃತ್ಯವೆಸಗಿದ್ದಾನೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.