Select Your Language

Notifications

webdunia
webdunia
webdunia
webdunia

ಗರ್ಭಿಣಿಯಾಗಲು ಯಾವ ವಯಸ್ಸು ಸೂಕ್ತ?

ಗರ್ಭಿಣಿಯಾಗಲು ಯಾವ ವಯಸ್ಸು ಸೂಕ್ತ?
ಬೆಂಗಳೂರು , ಮಂಗಳವಾರ, 31 ಜುಲೈ 2018 (09:30 IST)
ಬೆಂಗಳೂರು: ಹೊಸದಾಗಿ ಮದುವೆಯಾದ, ಮದುವೆ ಮಾಡಿಕೊಳ್ಳಲಿರುವ ಜೋಡಿಗಳಲ್ಲಿ ಈ ಪ್ರಶ್ನೆ ಕಾಡುವುದು ಸಹಜ. ತಮಗೆ ಯಾವಾಗ ಮಕ್ಕಳಾದರೆ ಚೆನ್ನ ಎನ್ನುವುದು ಎಲ್ಲರ ಸಾಮಾನ್ಯ ಪ್ರಶ್ನೆಯಾಗಿರುತ್ತದೆ.

ತಜ್ಞರು ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಕೆಲವರು ತಮ್ಮ 20 ರ ವಯಸ್ಸಿನಲ್ಲಿ ಗರ್ಭಿಣಿಯಾಗುವುದು ಸೂಕ್ತ ಎನ್ನುತ್ತಾರೆ. ಯಾಕೆಂದರೆ ಈ ವಯಸ್ಸಿನಲ್ಲಿ ಮಹಿಳೆಯರಲ್ಲಿ ಫಲವಂತಿಕೆ ಸಾಧ್ಯತೆ ಹೆಚ್ಚಿರುತ್ತದೆ.

ಆದರೆ ಮಹಿಳೆಯರ ದೇಹ ಮತ್ತು ಮನಸ್ಸು ಮಕ್ಕಳ ಪಾಲನೆಗೆ ಈ ವಯಸ್ಸಿನಲ್ಲಿ ಸಾಕಷ್ಟು ಪಕ್ವತೆ ಹೊಂದಿರುವುದಿಲ್ಲ. ಹಾಗಾಗಿ 30 ರಿಂದ 34 ವರ್ಷದೊಳಗೆ ಮಕ್ಕಳಾಗುವುದು ಸೂಕ್ತ ಎನ್ನುವುದು ತಜ್ಞರ ಅಭಿಮತ. 34 ವಯಸ್ಸು ದಾಟುತ್ತಿದ್ದಂತೇ ಮಹಿಳೆಯರಲ್ಲಿ ಫಲವಂತಿಕೆ ಕಡಿಮೆಯಾಗುತ್ತಾ ಸಾಗುತ್ತದೆ. ಹೀಗಾಗಿ ಈ ವಯಸ್ಸಿನಲ್ಲಿ ಮಕ್ಕಳ ಮಾಡಿಕೊಳ್ಳಲು ಬಯಸಿದರೂ ಫಲ ದೊರೆಯುವ ಸಾಧ್ಯತೆ ಕಡಿಮೆಯಾಗುತ್ತಾ ಹೋಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಡೋಮ್ ನಿಂದ ಸರಿಯಾಗಿ ಲೈಂಗಿಕ ಸುಖ ಸಿಗುತ್ತಿಲ್ಲವೇ…? ಹಾಗಾದ್ರೆ ಇದನ್ನು ಟ್ರೈ ಮಾಡಿ