Publish Date: Thu, 21 Jan 2021 (09:08 IST)
Updated Date: Thu, 21 Jan 2021 (09:12 IST)
ಲಕ್ನೋ : ವೈದ್ಯರ 21 ವರ್ಷದ ಮಗನನ್ನು ಅಪಹರಿಸಿದ ಅಪಹರಣಕಾರರು ಹಣಕ್ಕಾಗಿ ಬೇಡಿಕೆಯಿಟ್ಟ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ವೈದ್ಯ ಹರಿಪುರದ ಖಾಸಗಿ ಕಾಲೇಜಿನಲ್ಲಿ ಆಯುರ್ವೇದ ಔಷಧ ಮತ್ತು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಅವರ 21 ವರ್ಷದ ಮಗನನ್ನು ಕೊಟ್ವಾಲಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಅಪಹರಿಸಿ ಅಪಹರಣಕಾರರು ಆತನನ್ನು ಬಿಡುಗಡೆ ಮಾಡಲು 70ಲಕ್ಷರೂ ಕೇಳಿದ್ದಾರೆ. ಜನವರಿ 22ರೊಳಗೆ ನೀಡದಿದ್ದರೆ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ವೈದ್ಯರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.