Publish Date: Mon, 18 Jan 2021 (10:29 IST)
Updated Date: Mon, 18 Jan 2021 (10:31 IST)
ಭೋಪಾಲ್ : 14 ವರ್ಷದ ಹುಡುಗಿಯ ಮೇಲೆ ಒಂದು ದಿನದಲ್ಲಿ 9 ಪುರುಷರು ಮಾನಭಂಗ ಎಸಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಹುಡುಗಿಯನ್ನು ಇಬ್ಬರು ಲಾರಿ ಡ್ರೈವರ್ ಗಳು ಅಪಹರಿಸಿ ಮಾನಭಂಗ ಎಸೆಗಿದ್ದಾರೆ. ಬಳಿಕ ಆಕೆಯನ್ನು ಡಾಬಾ ಮಾಲೀಕರು ಮತ್ತು ಟ್ರಕ್ ಚಾಲಕರು ಸೇರಿ ಮಾನಭಂಗ ಎಸಗಿದ್ದಾರೆ. ಇತ್ತ ಪೋಷಕರು ಹುಡುಗಿ ನಾಪತ್ತೆಯಾದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯನ್ನು ರಕ್ಷಿಸಿ, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.