Select Your Language

Notifications

webdunia
webdunia
webdunia
webdunia

ಗರ್ಭಿಣಿಯನ್ನು ಅಪಹರಿಸಿ ಮತ್ತಿನ ಮಾತ್ರೆ ನೀಡಿ ಇಂತಹ ನೀಚ ಕೃತ್ಯ ಎಸಗಿದ ಕಾಮುಕರು

ಗರ್ಭಿಣಿಯನ್ನು ಅಪಹರಿಸಿ ಮತ್ತಿನ ಮಾತ್ರೆ ನೀಡಿ ಇಂತಹ ನೀಚ ಕೃತ್ಯ ಎಸಗಿದ ಕಾಮುಕರು
ಕೊಲ್ಹಾಪುರ , ಗುರುವಾರ, 14 ಜನವರಿ 2021 (08:57 IST)
ಕೊಲ್ಹಾಪುರ : ಅಸ್ಸಾಂ ಮೂಲದ ಗರ್ಭಿಣಿಗೆ ರಾಜಸ್ಥಾನದ ಇಬ್ಬರು ಪುರುಷರು ನಿದ್ರೆ ಬರುವ ಮಾತ್ರೆ ನೀಡಿ ಆಕೆಯ ಮೇಲೆ ಮಾನಭಂಗ ಎಸಗಿ ಬಲವಂತವಾಗಿ ಮದುವೆಯಾದ ಘಟನೆ  ನಡೆದಿದೆ.

6ತಿಂಗಳ ಗರ್ಭಿಣಿ ಮತ್ತು ಆಕೆಯ ಮೂವರು ಮಕ್ಕಳನ್ನು ಅಪಹರಿಸಿದ ಪುರುಷರು ಆಕೆಗೆ ನಿದ್ರೆ ಮಾತ್ರೆ ಮಿಕ್ಸ್ ಮಾಡಿದ ಪಾನೀಯ ಕುಡಿಸಿ ಆಕೆಯ ಮೇಲೆ ಮಾನಭಂಗ ಎಸಗಿ ಬಲವಂತವಾಗಿ ಮದುವೆಯಾಗಿದ್ದಾರೆ. ಬಳಿಕ ಆಕೆಯನ್ನು ತಮ್ಮ ಜೊತೆ ಇರಿಸಿಕೊಂಡು ಆಕೆಯ ಮಕ್ಕಳನ್ನು ಕೊಲ್ಲುವ ಬೆದರಿಕೆ ಹಾಕಿ ತಮ್ಮ ಜೊತೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ್ದಾರೆ.

ಕಾಮುಕರಿಂದ ಹೇಗೋ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯ ಮೇಲೆ ಮಾನಭಂಗ ಎಸಗಿದ ಕಾಮುಕರು ಮಾಡಿದ್ದೇನು ಗೊತ್ತಾ?