Publish Date: Wed, 13 Jan 2021 (09:50 IST)
Updated Date: Wed, 13 Jan 2021 (09:52 IST)
ಅಲಿಗ : 16 ವರ್ಷದ ಹುಡುಗಿಯನ್ನು ಅಪಹರಿಸಿ ಮಾನಭಂಗ ಎಸಗಿ ಕೊಂದ ಘಟನೆ ಅಲಿಗದ ಗಾಂಧಿ ಪಾರ್ಕ್ ಪ್ರದೇಶದಲ್ಲಿ ನಡೆದಿದೆ.
ಹುಡುಗಿ ನಾಪತ್ತೆಯಾದ ಹಿನ್ನಲೆಯಲ್ಲಿ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ. ಆದರೆ ಆಕೆಯನ್ನು ಅಪಹರಿಸಿರುವುದಾಗಿ ಮತ್ತು ಬಿಡುಗಡೆಗೊಳಿಸಲು 5ಲಕ್ಷ ರೂ ಹಣವನ್ನು ನೀಡಬೇಕೆಂದು ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ.
ಆದರೆ ಹುಡುಗಿಯ ಕುಟುಂಬದವರು ಹಣದ ನೀಡದ ಹಿನ್ನಲೆಯಲ್ಲಿ ಆಕೆಯ ಮೇಲೆ ಸಾಮೂಹಿಕ ಮಾನಭಂಗ ಎಸಗಿ ಕೊಂದು ರೈಲ್ವೆ ಹಳಿ ಮೇಲೆ ಎಸೆದಿದ್ದಾರೆ. ಶವ ಪೊಲೀಸರ ಕೈಗೆ ಸಿಕ್ಕಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.