Select Your Language

Notifications

webdunia
webdunia
webdunia
webdunia

ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ ಗ್ಯಾಂಗ್ ಅರೆಸ್ಟ್

ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ ಗ್ಯಾಂಗ್ ಅರೆಸ್ಟ್
ಜಲಾವರ್ , ಶುಕ್ರವಾರ, 8 ಜನವರಿ 2021 (06:46 IST)
ಜಲಾವರ್ : ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ದರೋಡೆಕೋರರ ಗ್ಯಾಂಗ್ ವೊಂದು ಮಹಿಳೆಯರು ಮತ್ತು ಮಕ್ಕಳನ್ನು  ಅಪಹರಿಸಿದ್ದಾರೆ.

ಅಪಹರಣಕಾರರು ಮಕ್ಕಳು ಮತ್ತು ಮಹಿಳೆಯರನ್ನು ಮಿನಿ ಬಸ್ ಗಳಲ್ಲಿ ಕರೆದೊಯ್ಯದಿದ್ದಾರೆ. ಅವರು ಕೈಯಲ್ಲಿ ತೀಕ್ಷ್ಣವಾದ ಕತ್ತಿ, ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎನ್ನಲಾಗಿದೆ. ಹಾಗೇ ಮಹಿಳೆಯರು ಮತ್ತು ಮಕ್ಕಳು ಕಂಜಾರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಪಹರಣಕಾರರು ಮಧ್ಯಪ್ರದೇಶದ ರತ್ನಂ ಜಿಲ್ಲೆಯ ಅಲೋಟ್ ತಹಸಿಲ್ ನ ಕಲ್ಸಿಯಾ ಗ್ರಾಮದಿಂದ ಬಂದವರು ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ  ಅವರು ಅಪಹರಣಕಾರರನ್ನು ಬೆನ್ನಟ್ಟಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಯ ಮೇಲೆ ಮಾನಭಂಗ ಎಸಗಿ ಇಂತಹ ನೀಚ ಕೃತ್ಯ ಎಸಗಿದ ಯುವಕ