ಮುಂಬೈ : 25 ವರ್ಷದ ಮಹಿಳೆಯೊಬ್ಬಳು ತನ್ನ ಅವಳಿ ಹೆಣ್ಣುಮಕ್ಕಳನ್ನು ನೀರಿನ ಟ್ಯಾಂಕ್ ನಲ್ಲಿ ಮುಳುಗಿಸಿ ಕೊಂದ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ. 
									
										
								
																	
ಮಹಿಳೆ ಒಂದು ತಿಂಗಳ ಹಿಂದೆ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಎಲ್ಲರೂ ಹೆಣ್ಣಮಕ್ಕಳು ಎಂದು ನಿಂದಿಸಿದ ಕಾರಣ ಹಾಗೂ ಅಳುತ್ತಿದ್ದ ಮಕ್ಕಳನ್ನು ಮನೆಯವರು ಸಂತೈಸಲು ಬಾರದ ಕಾರಣದಿಂದ ಕೋಪಗೊಂಡ ಆಕೆ ಇಂತಹ ಘೋರ ಕೃತ್ಯ ಎಸಗಿದ್ದಾಳೆ.
									
			
			 
 			
 
 			
			                     
							
							
			        							
								
																	ಮಕ್ಕಳು ಕಾಣೆಯಾದಾಗ ಮನೆಯವರು ಮಹಿಳೆಯನ್ನು ವಿಚಾರಿಸಿದಾಗ ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ. ಮಹಿಳೆಯ ವಿರುದ್ಧ ಕೊಲೆಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.