Select Your Language

Notifications

webdunia
webdunia
webdunia
Saturday, 12 April 2025
webdunia

ವಿಧವೆಯ ಮೇಲೆ ದೇವಾಲಯದಲ್ಲಿ ಮಾನಭಂಗ ಎಸಗಿದ ಕಾಮುಕರು

ನಾಗಪಟ್ಟಣಂ
ನಾಗಪಟ್ಟಣಂ , ಶನಿವಾರ, 9 ಜನವರಿ 2021 (07:25 IST)
ನಾಗಪಟ್ಟಣಂ : ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದ 40 ವರ್ಷದ ವಿಧವೆಯೊಬ್ಬಳನ್ನು ದೇವಾಲಯವೊಂದರಲ್ಲಿ ಸಾಮೂಹಿಕ ಮಾನಭಂಗ ಎಸಗಿದ ಘಟನೆ ನಾಗಪಟ್ಟಣಂನಲ್ಲಿ ನಡೆದಿದೆ.

ರಾತ್ರಿ ಮಹಿಳೆ ಹತ್ತಿರದಲ್ಲಿದ್ದ ತನ್ನ ಸೋದರಿಯ ಮನೆಗೆ ಕಡೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಅಡ್ಡಬಂದ ಇಬ್ಬರು ಚಾಕು ತೋರಿಸಿ ಆಕೆಯನ್ನು ದೇವಾಲಯಕ್ಕೆ ಎಳೆದುಕೊಂಡು ಹೋಗಿ ಇಂತಹ ಘೋರ ಕೃತ್ಯ ಎಸಗಿದ್ದಾರೆ. ಆಕೆಯ ಕೂಗಾಟ ಕೇಳಿ ಸ್ಥಳೀಯರು ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನೆಯ ವೇಳೆ ಮಹಿಳೆಯ ಕೈಯಲ್ಲಿದ್ದ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳಿಗೆ ಕಿರುಕುಳ ನೀಡಿದ್ದನ್ನು ಪ್ರಶ್ನಿಸಿದ ತಂದೆಯನ್ನು ಕೊಂದ ದುಷ್ಕರ್ಮಿಗಳು