ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ನಂತರ ಪಾಪಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಮುಂದಾಗಿರುವ ಭಾರತೀಯ ಸೇನೆ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಒಂದು ವಿಡಿಯೋ ಪೋಸ್ಟ್ ಮಾಡಿದ್ದು, ಇದನ್ನು ನೋಡಿದರೆ ಪಾಕಿಸ್ತಾನದ ನಡುಕ ಹೆಚ್ಚಾಗಬಹುದು.
ಭಾರತ ಈಗಾಗಲೇ ಗಡಿಯಲ್ಲಿ ಉಗ್ರರನ್ನು ಸದೆಬಡಿಯುವ ಕೆಲಸದಲ್ಲಿ ನಿರತವಾಗಿದೆ. ಇನ್ನು ಗಡಿಯಲ್ಲಿ ಸೈನ್ಯ ನಿಯೋಜಿಸಿದ್ದು, ಸಮುದ್ರ ಗಡಿಯಲ್ಲೂ ಯುದ್ಧ ನೌಕೆಗಳನ್ನು ಇರಿಸಿ ಎದುರಾಳಿಗಳಿಗೆ ಖಡಕ್ ಸೂಚನೆ ಕೊಟ್ಟಿದೆ.
ಇಷ್ಟೆಲ್ಲಾ ಇದ್ದರೂ ಮೊನ್ನೆಯಿಂದ ಗಡಿಯಲ್ಲಿ ಪದೇ ಪದೇ ಗುಂಡಿನ ಚಕಮಕಿ ನಡೆಸುತ್ತಿರುವ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆ ಟ್ವೀಟ್ ವಿಡಿಯೋ ಮೂಲಕ ಖಡಕ್ ಸಂದೇಶವೊಂದನ್ನು ರವಾನಿಸಿದೆ. ನಾವು ಯಾವುದಕ್ಕೂ ರೆಡಿ ಎಂದಿದೆ.
ಭಾರತೀಯ ಯೋಧರ ಸಾಹಸದ ವಿಡಿಯೋವೊಂದನ್ನು ಪ್ರಕಟಿಸಿರುವ ಭಾರತೀಯ ಆರ್ಮಿ ಟ್ವೀಟ್ ಪೇಜ್, ಯಾವುದಕ್ಕೂ ಹೆದರಲ್ಲ, ಬಗ್ಗಲ್ಲ, ನಿಯಂತ್ರಿಸಲು ಸಾಧ್ಯವಿಲ್ಲ. ಯಾವ ಗುರಿಯೂ ನಮಗೆ ಕಠಿಣವಲ್ಲ, ಅಸಾಧ್ಯವಲ್ಲ. ಎಲ್ಲದಕ್ಕೂ ನಾವು ರೆಡಿ ಎಂದು ಸೇನೆ ವಿಡಿಯೋವೊಂದನ್ನು ಪ್ರಕಟಿಸಿ ಪಾಕಿಸ್ತಾನಕ್ಕೆ ಸಂದೇಶ ಮುಟ್ಟಿಸಿದೆ.