ಹೈದರಾಬಾದ್: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತದಲ್ಲಿ ನೆಲೆಸಿರುವ ಎಲ್ಲಾ ಪಾಕಿಸ್ತಾನ ಪ್ರಜೆಗಳೂ ತಕ್ಷಣವೇ ಜಾಗ ಖಾಲಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶದಿಂದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪುತ್ರ ಇಝಾನ್ ಗೂ ಈ ನಿಯಮ ಅನ್ವಯವಾಗುತ್ತಾ?
ಎಲ್ಲರಿಗೂ ಗೊತ್ತಿರುವ ಹಾಗೆ ಸಾನಿಯಾ ಮಿರ್ಜಾ ಪಾಕಿಸ್ತಾನ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು 2010 ರಲ್ಲಿ ವಿವಾಹವಾಗಿ ಈಗ ವಿಚ್ಛೇದನ ಪಡೆದಿದ್ದಾರೆ. ಆದರೆ ಇವರಿಬ್ಬರ ಪುತ್ರ ಇಝಾನ್ ಈಗ ಸಾನಿಯಾ ಬಳಿಯಿದ್ದಾರೆ.
ತಂದೆ ಪಾಕಿಸ್ತಾನಿಯಾಗಿರುವ ಕಾರಣ ಇಝಾನ್ ಗೂ ಈ ನಿಯಮ ಅನ್ವಯವಾಗುತ್ತದಾ ಎನ್ನುವ ಪ್ರಶ್ನೆ ಕೆಲವರಲ್ಲಿದೆ. ಆದರೆ ಇಝಾನ್ ಗೆ ಈ ನಿಯಮ ಅನ್ವಯವಾಗಲ್ಲ. ಯಾಕೆಂದರೆ ಸಾನಿಯಾ ಈಗಾಗಲೇ ತಮ್ಮ ಪುತ್ರನನ್ನು ಭಾರತ ನಾಗರಿಕತ್ವಕ್ಕೆ ನೊಂದಾಯಿಸಿಕೊಂಡಿದ್ದಾರೆ. ಹೀಗಾಗಿ ಇಝಾನ್ ಗೆ ಭಾರತೀಯ ಪೌರತ್ವವಿದೆ. ಆತ ಹುಟ್ಟಿದ್ದೂ ಭಾರತದಲ್ಲಿಯೇ. ಹೀಗಾಗಿ ಆತನಿಗೆ ಈ ನಿಯಮ ಅನ್ವಯವಾಗುವುದಿಲ್ಲ.