Publish Date: Sat, 26 Apr 2025 (12:16 IST)
Updated Date: Sat, 26 Apr 2025 (12:18 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದಿದ್ದರಿಂದ ಬೆಳೆಗಾರರಲ್ಲಿ ನಿರಾಸೆ ಮೂಡಿತ್ತು. ಆದರೆ ಇಂದು ಬೆಳೆಗಾರರ ಮುಖದಲ್ಲಿ ಕೊಂಚ ಖುಷಿ ಮೂಡಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.
ಅಡಿಕೆ ಬೆಲೆ ಹೆಚ್ಚಳ ನಿರೀಕ್ಷೆಯಲ್ಲಿದ್ದ ರೈತರಿಗೆ ಕೊಂಚ ನಿರಾಸೆಯಾಗಿತ್ತು. ಆದರೆ ಕಡಿಮೆಯಾಗಿಲ್ಲ ಎನ್ನುವುದೇ ಸಮಾಧಾನಕರ ವಿಷಯವಾಗಿತ್ತು. ಆದರೆ ಇಂದು ಕೆಲವು ವರ್ಗದ ಅಡಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಆದರೆ ಹೊಸ ಮತ್ತು ಹಳೆ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆಗೆ ಇಂದೂ ಗರಿಷ್ಠ 440 ರೂ. ಗಳಷ್ಟಿದ್ದರೆ, ಹಳೆ ಅಡಿಕೆ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 510 ರೂ.ಗಳಷ್ಟಿದೆ.
ಆದರೆ ಪಟೋರ ಮತ್ತು ಉಳ್ಳಿ ದರ ಏರಿಕೆಯಾಗಿದೆ. ಹೊಸ ಫಟೋರ ದರ 345 ರಿಂದ 350 ರೂ.ಗಳಷ್ಟಾಗಿದೆ. ಹಳೆ ಫಟೋರ ದರ 355 ರೂ. ಗಳಿದ್ದಿದ್ದು 360 ರೂ. ಗಳಷ್ಟಿದೆ. ಹೊಸ ಉಳ್ಳಿ ದರ ಭಾರೀ ಏರಿಕೆಯಾಗಿದ್ದು ಗರಿಷ್ಠ 240 ರೂ., ಹಳೆ ಉಳ್ಳಿ ದರವೂ ಏರಿಕೆಯಾಗಿ 240 ಗಳಷ್ಟಾಗಿದೆ. ಆದರೆ ಹೊಸ ಕೋಕ ದರ 290 ರೂ., ಹಳೇ ಕೋಕ 300 ರೂ. ಗಳಷ್ಟೇ ಇದೆ.
ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿದೆ. ಇಂದು ಮತ್ತೆ ಕಾಳುಮೆಣಸು ದರ 15 ರೂ. ಕಡಿಮೆಯಾಗಿದ್ದು 680 ರೂ.ಗಳಷ್ಟಿದೆ. ಇನ್ನು ಒಣಕೊಬ್ಬರಿ ದರ ಗರಿಷ್ಠ 175 ರೂ.ಗಳಷ್ಟೇ ಇದೆ.