ನವದೆಹಲಿ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಈಗೇನಾದರೂ ಯುದ್ಧ ನಡೆದರೆ ಭಾರತದ ಜೊತೆ ಯಾವೆಲ್ಲಾ ರಾಷ್ಟ್ರ ನಿಲ್ಲಬಹುದು ನೋಡಿ.
ಉಗ್ರರು ದಾಳಿ ಮಾಡುತ್ತಿದ್ದಂತೇ ಆಕ್ರೋಶಗೊಂಡಿರುವ ಭಾರತ ಆ ದೇಶದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿದೆ. ಜೊತೆಗೆ ಗಡಿಯಲ್ಲಿ ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದೆ. ಸೇನೆ ಜಮಾವಣೆ ಮಾಡಿದೆ. ಭಾರತ ದಾಳಿ ಮಾಡಬಹುದು ಎಂಬ ಹೆದರಿಕೆಗೆ ಅತ್ತ ಪಾಕಿಸ್ತಾನ ಕೂಡಾ ತನ್ನ ಸೇನೆಯನ್ನು ಸನ್ನದ್ಧಗೊಳಿಸಿದೆ. ಇದರಿಂದಾಗಿ ಒಂದು ರೀತಿಯಲ್ಲಿ ಯುದ್ಧದ ಕಾರ್ಮೋಡವಿದೆ.
ಈಗೇನಾದರೂ ಯುದ್ಧ ನಡೆದರೆ ಭಾರತವೇ ಮೇಲುಗೈ ಸಾಧಿಸಲಿದೆ. ಯಾಕೆಂದರೆ ಭಾರತ ಕೆಲವು ಪ್ರಬಲ ರಾಷ್ಟ್ರಗಳೊಂದಿಗೆ ತನ್ನ ವಿದೇಶಾಂಗ ಸಂಬಂಧವನ್ನು ಅಷ್ಟರಮಟ್ಟಿಗೆ ಅಭಿವೃದ್ಧಿಪಡಿಸಿದೆ. ಅಮೆರಿಕಾ, ರಷ್ಯಾ, ಇಸ್ರೇಲ್ ನಂತಹ ಪ್ರಬಲ ರಾಷ್ಟ್ರದ ಸ್ನೇಹ ಸಂಪಾದಿಸಿದೆ.
ಒಂದು ವೇಳೆ ಈಗೇನಾದರೂ ಯುದ್ಧ ಸಂಭವಿಸಿದರೆ ಭಾರತಕ್ಕೆ ಈ ಮೂರೂ ಪ್ರಬಲ ರಾಷ್ಟ್ರಗಳು ಬೆಂಬಲ ನೀಡಲಿವೆ. ಈಗಾಗಲೇ ಅಮೆರಿಕಾ ಮತ್ತು ಇಸ್ರೇಲ್ ತನ್ನ ಯುದ್ಧ ವಿಮಾನಗಳನ್ನು ಭಾರತಕ್ಕೆ ತಂದು ನಿಲ್ಲಿಸಿರುವುದೇ ಇದಕ್ಕೆ ಸಾಕ್ಷಿ. ಅತ್ತ ರಷ್ಯಾ ಜೊತೆಗೂ ಭಾರತಕ್ಕೆ ಈಗ ಉತ್ತಮ ಬಾಂಧವ್ಯವಿದೆ. ಜೊತೆಗೆ ಗಲ್ಫ್ ರಾಷ್ಟ್ರಗಳೊಂದಿಗೂ ಭಾರತ ಈಗ ಉತ್ತಮ ಸಂಬಂಧ ಕಾಯ್ದುಕೊಂಡಿದೆ. ಇದು ಪಾಕಿಸ್ತಾನಕ್ಕೆ ಹೊಡೆತ ನೀಡಲಿದೆ.
ಇನ್ನು, ಪಾಕಿಸ್ತಾನಕ್ಕೆ ನೆರೆಯ ದೈತ್ಯ ರಾಷ್ಟ್ರ ಚೀನಾ ಬೆಂಬಲ ನೀಡಬಹುದು. ಇದರ ಹೊರತಾಗಿ ಬ್ರಿಟನ್ ತಟಸ್ಥವಾಗಿರುವ ಸಾಧ್ಯತೆಯೇ ಹೆಚ್ಚು. ಕೇವಲ ಶಸ್ತ್ರಾಸ್ತ್ರ ವಿಚಾರದಲ್ಲಿ ಮಾತ್ರವಲ್ಲ, ವಿದೇಶಗಳ ಬೆಂಬಲ ವಿಚಾರದಲ್ಲೂ ಭಾರತ ಪಾಕಿಸ್ತಾನಕ್ಕಿಂತ ಒಂದು ಕೈ ಮೇಲಿದೆ.