Select Your Language

Notifications

webdunia
webdunia
webdunia
Friday, 11 April 2025
webdunia

ಲೈಂಗಿಕ ಸುಖ ನೀಡದ ಸಿನೆಮಾ ನಟಿಯನ್ನು ನಗ್ನಗೊಳಿಸಿ ಥಳಿತ

ಹೈದ್ರಾಬಾದ್ ಬಾರ್ ಡಾನ್ಸರ್
ಹೈದ್ರಾಬಾದ್ , ಸೋಮವಾರ, 17 ಜೂನ್ 2019 (15:20 IST)
ಬಾರ್ ಡಾನ್ಸರ್‌ ಉದ್ಯೋಗದಲ್ಲಿರುವ ಯುವತಿ  ಲೈಂಗಿಕ ಸುಖ ನೀಡಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ನಗ್ನಗೊಳಿಸಿ ಥಳಿಸಿದ ಆರೋಪದ ಮೇಲೆ ನಾಲ್ವರು ಮಹಿಳೆಯರನ್ನು ಬೇಗಂಪೇಟ್ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಆಂಧ್ರ ಚಿತ್ರರಂಗದಲ್ಲಿ ಕಿರಿಯ ನೃತ್ಯ ಕಲಾವಿದೆಯಾಗಿದ್ದ ಯುವತಿ, ನಂತರ ಹಣದ ಅನಿವಾರ್ಯತೆಯಿಂದಾಗಿ ಬಾರ್‌ನಲ್ಲಿ ಡಾನ್ಸರ್ ಆಗಿ ಸೇರಿಕೊಂಡಿದ್ದಳು. ಪೊಲೀಸ್ ಠಾಣೆಗೆ ತೆರಳಿ ಮನವಿ ಮಾಡಿದರೂ ಯಾರೂ ನೆರವಿಗೆ ಬರಲಿಲ್ಲ ಎಂದು ಯುವತಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.
 
ನಗರದ ಪ್ರಖ್ಯಾತ ಹೋಟೆಲ್‌ನಲ್ಲಿ ಬಾರ್ ಡಾನ್ಸರ್ ಆಗಿ ಕೆಲಸಕ್ಕೆ ಸೇರಿದ್ದ ಯುವತಿಗೆ ಕೆಲ ದಿನಗಳ ನಂತರ ಬಾರ್ ಅಡಳಿತ ಮಂಡಳಿ ಗಿರಾಕಿಗಳಿಗೆ ಲೈಂಗಿಕ ಸುಖ ನೀಡುವಂತೆ ಒತ್ತಡ ಹೇರತೊಡಗಿತ್ತು ಎಂದು ಮೂಲಗಳು ತಿಳಿಸಿವೆ. 
 
ಯುವತಿ ಹಣಕ್ಕಾಗಿ ದೇಹ ಮಾರಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಆಕೆಯ ಸಹೋದ್ಯೋಗಿಗಳಾದ ನಾಲ್ವರು ಯುವತಿಯರು ಹಾಗೂ ಸಯ್ಯದ್ ಎನ್ನುವ ಗಿರಾಕಿಯೊಬ್ಬ ಯುವತಿಯನ್ನು ನಡುರಸ್ತೆಯಲ್ಲಿಯೇ ನಗ್ನಗೊಳಿಸಿ ಥಳಿಸಿ ಹೇಯ ಕೃತ್ಯ ಮೆರೆದಿದ್ದಾರೆ.
 
ನಗರದ ಪ್ರಖ್ಯಾತ ಹೋಟೆಲ್‌ಳಲ್ಲಿ ಒಂದಾದ ಲಿಸ್ಬನ್ ರೆಸ್ಟ್ರೋಬಾರ್‌ನಲ್ಲಿ ಯುವತಿ ಉದ್ಯೋಗದಲ್ಲಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಜನರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ಕೇಸ್ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರ ಮೇಲೆ ತಲ್ವಾರ್‌ ದಾಳಿ ನಡೆಸಿದ ಅಟೋ ಚಾಲಕ ವಿಡಿಯೋ ವೈರಲ್