Select Your Language

Notifications

webdunia
webdunia
webdunia
webdunia

ಪೊಲೀಸರ ಮೇಲೆ ತಲ್ವಾರ್‌ ದಾಳಿ ನಡೆಸಿದ ಅಟೋ ಚಾಲಕ ವಿಡಿಯೋ ವೈರಲ್

ಪೊಲೀಸರ ಮೇಲೆ ತಲ್ವಾರ್‌ ದಾಳಿ ನಡೆಸಿದ ಅಟೋ ಚಾಲಕ ವಿಡಿಯೋ ವೈರಲ್
ಬೆಂಗಳೂರು , ಸೋಮವಾರ, 17 ಜೂನ್ 2019 (13:56 IST)
ದೆಹಲಿಯ ಜನನಿಬಿಡ ರಸ್ತೆಯಲ್ಲಿ ಆಟೋ ಚಾಲಕನೊಬ್ಬ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ದೆಹಲಿಯ ರಸ್ತೆಯಲ್ಲಿ ಕಾರು ಚಾಲಕ ಮತ್ತು ಆಟೋ ಚಾಲಕ ಸರ್ದಾರ್‌ಜಿ ವಾಗ್ವಾದಕ್ಕಿಳಿದಿದ್ದಾರೆ. ಪಕ್ಕದಲ್ಲಿದ್ದ ಪೊಲೀಸ್ ಅಧಿಕಾರಿಗಳ ಬಳಿ ಹೋಗಿ ಪರಸ್ಪರ ದೂರು ನೀಡಿದ್ದಾರೆ. 
 
ಪೊಲೀಸರು ಸರ್ದಾರ್ಜಿಯನ್ನು ತನಿಖೆ ನಡೆಸಲು ಹೋದಾಗ, ಆತ ತನ್ನ ಬೆನ್ನಿನ ಹಿಂದೆ ಅಡಗಿಸಿಟ್ಟಿದ್ದ ತಲ್ವಾರ್‌ ಹೊರ ತೆಗೆದು ಹಠಾತ್ತನೆ ದಾಳಿ ಮಾಡಲು ಪ್ರಾರಂಭಿಸಿದನು. ಆಘಾತಗೊಂಡಿದ್ದ ಪೊಲೀಸರು ಹಿಮ್ಮೆಟ್ಟಿದರು. ನಂತರ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಬಂಧಿಸಿದ್ದಾರೆ.
 
ಘಟನೆಯು ಪ್ರದೇಶದಲ್ಲಿ ಒಂದು ಕ್ಷಣ ಆತಂಕಕ್ಕೆ ಕಾರಣವಾಯಿತು. ಘಟನೆಯ ವೀಡಿಯೊವನ್ನು ತನ್ನ ಫೋನ್‌ನಲ್ಲಿ ತೆಗೆದ ವ್ಯಕ್ತಿಯು ಅದನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಮವಾಸ್ತವ್ಯದ ನಾಟಕ ನಿಲ್ಲಿಸಿ-ಸಿಎಂಗೆ ಬಿಎಸ್ ವೈ ಸಲಹೆ