Publish Date: Fri, 07 Jun 2019 (17:26 IST)
Updated Date: Fri, 07 Jun 2019 (19:36 IST)
ಅಟೋ ಚಾಲಕನಿಗೆ ಒಂದೇ ದಿನ ಇಬ್ಬರು ಯುವತಿಯರೊಂದಿಗೆ ವಿವಾಹವಾಗಿರುವುದು ಪ್ರತಿಯೊಬ್ಬರಿಗು ಅಚ್ಚರಿ ಮೂಡಿಸಿದೆ. ಹಣವಿದ್ದವರು ಕೂಡಾ ಒಂದೇ ಹೆಂಡತಿಯನ್ನು ಸಾಕಲು ಸಾಧ್ಯವಾಗದಂತಹ ಸ್ಥಿತಿಯಲ್ಲಿ ಅಟೋ ಚಾಲಕನ ಧೈರ್ಯ ಮೆಚ್ಚಬೇಕಾದುದ್ದೆ.
ತಮಿಳುನಾಡಿನ ತಿರುಪುರ್ ಜಿಲ್ಲೆಯ ತಾರಾಪುರ ಹತ್ತಿರವಿರುವ ಪುದುಕೊಟ್ಟೆಮೆಡು ಗ್ರಾಮದ ನಿವಾಸಿಯಾಗಿರುವ ಅಟೋ ಚಾಲಕ, ಪ್ರತಿನಿತ್ಯ ತನ್ನ ಅಟೋದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಪ್ರೇಮಿಸಿದ್ದಾನೆ. ಕಳೆದ ತಿಂಗಳು 29 ರಂದು ಯುವತಿ ಕಾಣೆಯಾಗಿದ್ದಾಳೆ. ಯುವತಿಯ ಪೋಷಕರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ತಾರಾಪುರ ಪಟ್ಟಣದಲ್ಲಿರುವ ಅಟೋ ಚಾಲಕನೊಂದಿಗೆ ಯುವತಿಯಿದ್ದಾಳೆ ಎನ್ನುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಸುಳಿವು ಆಧರಿಸಿ ಪೊಲೀಸರು ಅಟೋ ಚಾಲಕನಿದ್ದ ಗ್ರಾಮಕ್ಕೆ ತೆರಳಿದ್ದಾರೆ.ಅಲ್ಲಿಗೆ ಹೋದ ಪೊಲೀಸರಿಗೆ ಶಾಕ್ ಆಗಿದೆ.
ಇದರಲ್ಲಿ ಶಾಕ್ ಆಗುವಂತಹ ವಿಷಯ ಏನಿದೆ? ಎಂದುಕೊಂಡಿರಾ? ಹೌದು ಇದೆ, ಅಟೋ ಚಾಲಕ ಇಬ್ಬರು ಯುವತಿಯರನ್ನು ಒಂದೇ ದಿನ ಒಂದೇ ವೇದಿಕೆಯಲ್ಲಿಯೇ ವಿವಾಹವಾಗಿದ್ದಾನೆ.
ಅದಲ್ಲದೇ ಅಟೋ ಚಾಲಕನೊಂದಿಗೆ ಜೀವನ ಸಾಗಿಸ್ತೇವೆ. ಆತನ ಜೊತೆಗೆ ಇರುತ್ತೇವೆ ಎನ್ನುವ ಇಬ್ಬರು ಪತ್ನಿಯರ ಮಾತುಗಳನ್ನು ಕೇಳಿ ಪೊಲೀಸರು ದಂಗಾಗಿದ್ದಾರೆ. ಕೌನ್ಸಿಲಿಂಗ್ ಮಾಡಿದರೂ ಯಾವುದೇ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರನ್ನು ಅಟೋ ಚಾಲಕನ ಹತ್ತಿರ ಕಳುಹಿಸುವಂತಹ ಪರಿಸ್ಥಿತಿ ಪೊಲೀಸರಿಗೆ ಎದುರಾಗಿದೆ.