Publish Date: Mon, 17 Jun 2019 (12:15 IST)
Updated Date: Mon, 17 Jun 2019 (12:16 IST)
ಮೈಸೂರು : ಸಿಎಂ ಕುಮಾರಸ್ವಾಮಿಯವರೇ ಗ್ರಾಮವಾಸ್ತವ್ಯದ ನಾಟಕ ನಿಲ್ಲಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಶೇ.80ರಷ್ಟು ಹಳ್ಳಿಗಳಲ್ಲಿ ಮುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮವಾಸ್ತವ್ಯದ ಬದಲು ಬರ ಪರಿಸ್ಥಿತಿಯನ್ನು ನಿಭಾಯಿಸಿ. ಅಧಿಕಾರಿಗಳು ಏನು ಮಾಡುತ್ತಿದ್ದಾರೆಂದು ಪರಿಶೀಲನೆ ಮಾಡಿ ಎಂದು ಸಿಎಂ ಕುಮಾರಸ್ವಾಮಿಗೆ ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಹಾಗೇ ಜಿಂದಾಲ್ ಭೂಮಿ ಪರಭಾರೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ಯಾವುದೇ ತೀರ್ಮಾನವನ್ನು ಕೈಗೊಳ್ಳುವುದೂ ಇಲ್ಲ. ನಾವು ಪ್ರತಿಭಟನೆ ಮಾಡುವುದು ಸಿಎಂ ಗೊತ್ತಿತ್ತು. ಆಗಲೇ ಅವರು ನಮ್ಮನ್ನು ಮಾತುಕತೆಗೆ ಕರೆಯಬಹುದಿತ್ತು ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.