Publish Date: Tue, 28 May 2019 (17:02 IST)
Updated Date: Tue, 28 May 2019 (17:07 IST)
ಸರ್ಕಾರಿ ವಸತಿ ನಿಲಯಕ್ಕೆ ನುಗ್ಗಿದ ಪೊಲೀಸ್ ಪೇದೆಯೊಬ್ಬ ಗೂಂಡಾವರ್ತನೆ ತೋರಿ ಅಲ್ಲಿದ್ದವರನ್ನು ಥಳಿಸಿದ್ದಾನೆ.
ವಸತಿ ನಿಲಯದ ಬಾಲಕರ ಕೋಠಡಿಗೆ ನುಗ್ಗಿ ಮದ್ಯಪಾನ ಮಾಡಿದ ಪೇದೆಯೊಬ್ಬ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾನೆ.
ಮದ್ಯಪಾನ ವಿರೋಧಿಸಿದ್ದಕ್ಕೆ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ವಿದ್ಯಾರ್ಥಿಗೆ ಥಳಿಸುತ್ತಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ಘಟನೆ ನಡೆದಿದೆ. ನಗರದ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಘಟನೆ ನಡೆದಿದೆ. ಗೌರಿಬಿದನೂರು ನಗರಠಾಣೆ ಪೇದೆ ಶ್ರೀನಿವಾಸನಿಂದ ಕೃತ್ಯ ನಡೆದಿದೆ.
ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡುತ್ತಿದ್ದ ಶ್ರೀನಿವಾಸ. ಕೊಠಡಿಯಲ್ಲಿದ್ದ ಬಾಲಕರು ಮಧ್ಯಪಾನ ಮಾಡುವಂತೆ ಒತ್ತಾಯಿಸುತ್ತಿದ್ದನು. ವಸತಿ ನಿಲಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದ ಪೇದೆ ಶ್ರೀನಿವಾಸ್,
ವಿರುದ್ದ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪೊಲೀಸ್ ಠಾಣೆ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ರು.