Publish Date: Sun, 19 May 2019 (14:05 IST)
Updated Date: Sun, 19 May 2019 (14:07 IST)
ಚಿಂಚೋಳಿ ಉಪ ಚುನಾವಣೆ ಮತದಾನ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
ಕೊಡ್ಲಾ ಗ್ರಾಮದಲ್ಲಿ ಕಾಂಗ್ರೆಸ್ ಬಿಜೆಪಿ ವಾಗ್ವಾದ ನಡೆಸಿವೆ.
ಕೊಡ್ಲಾ ಅಗಸಿ ಬಳಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಬಂದಾಗ ಬಿಜೆಪಿ ಪರವಾಗಿ ಘೋಷಣೆ ಹಾಕಿದ್ದಾರೆ ಬಿಜೆಪಿ ಕಾರ್ಯಕರ್ತರು.
ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್ ಪರವಾಗಿ ಜೈಘೋಷ ಹಾಕಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು. ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಢೋಡ ಅವರನ್ನು ಬೇರಡೆ ಕಳೆಸಿದರೂ ಘೋಷಣೆ ನಿಲ್ಲಲಿಲ್ಲ. ಎರಡು ಕಡೆಯವರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ನಡೆಸಿದ್ರು.
ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ ಎರಡು ಪಕ್ಷದ ಕಾರ್ಯಕರ್ತರು ಮತ್ತಷ್ಟು ವಾಗ್ವಾದ ಮುಂದುವರಿಸಿದ್ರು.
ಇದರಿಂದ ಸ್ಥಳೀಯ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು, ಗ್ರಾಮದಲ್ಲಿ ನಿರ್ಮಾಣವಾದ ಗೊಂದಲದ ವಾತಾವರಣವನ್ನು ಕಾರ್ಯಕರ್ತರನ್ನು ಚದುರಿಸುವ ಮೂಲಕ ತಿಳಿಗೊಳಿಸಿದ್ರು.