ಬಿಜೆಪಿ ಅಭ್ಯರ್ಥಿ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸ್ ವಜಾ

ಮಂಗಳವಾರ, 23 ಏಪ್ರಿಲ್ 2019 (15:15 IST)
ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಕೇಸ್ ನ್ನು ಮಹಿಳಾ ಆಯೋಗ ವಜಾ ಮಾಡಿದೆ.

ತೇಜಸ್ವಿ ಸೂರ್ಯ ವಿರುದ್ಧ ನಾನು ಯಾವ ಆರೋಪ ಮಾಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ ಎಂದು ಆ ಮಹಿಳೆಯೇ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾಳೆ. ಹೀಗಾಗಿ ರಾಜ್ಯ ಮಹಿಳಾ ಆಯೋಗ ಪ್ರಕರಣ ಕೈಬಿಟ್ಟಿದೆ.

ನಾನು ಮತ್ತು ತೇಜಸ್ವಿ ಉತ್ತಮ ಸ್ನೇಹಿತರು. ಟ್ವಿಟ್ಟರ್ ನಲ್ಲಿ ಆರೋಪ ಮಾಡಿದ್ದೇನೆ ಎನ್ನುವುದು ಸುಳ್ಳು ಮಾಹಿತಿ. ನಮ್ಮಿಬ್ಬರ ನಡುವೆ ಕಿಡಿಗೇಡಿಗಳು ಮಾಡಿರೋ ಕೆಲಸ ಇದಾಗಿದೆ ಎಂದಿದ್ದಾರೆ  ಆ ಯುವತಿ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಗೆ ನಾಲ್ಕು ಜನರು ಮಾಡಿದ್ರು ರೇಪ್