Select Your Language

Notifications

webdunia
webdunia
webdunia
webdunia

ಪತ್ನಿ ಜೊತೆ ಕಿತ್ತಾಡಿ ತನ್ನ ಕುತ್ತಿಗೆಯನ್ನೇ ಸೀಳಿಕೊಂಡ ಪತಿ

ಪತ್ನಿ ಜೊತೆ ಕಿತ್ತಾಡಿ ತನ್ನ ಕುತ್ತಿಗೆಯನ್ನೇ ಸೀಳಿಕೊಂಡ ಪತಿ
ಕಾನ್ಪುರ , ಮಂಗಳವಾರ, 16 ಮಾರ್ಚ್ 2021 (09:25 IST)
ಕಾನ್ಪುರ: ಪತ್ನಿ ಜೊತೆ ಜಗಳವಾಡಿ ಮನನೊಂದ ಪತಿ ತನ್ನ ಕುತ್ತಿಗೆ ಸೀಳಿಕೊಂಡು ಸ್ವಯಂ ಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಕಲಹದ ಬಳಿಕ ಪತ್ನಿ ಬೇಸರಿಸಿಕೊಂಡು ತವರಿಗೆ ಹೋಗಿದ್ದಳು. ಇದಾದ ಬಳಿಕ ಪತಿ ಈ ಕೃತ್ಯವೆಸಗಿದ್ದಾನೆ. ತಕ್ಷಣವೇ ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತವರಿಗೆ ಹೋದ ಪತ್ನಿಯ ಬಳಿ ಮರಳಿ ಬರುವಂತೆ ಕೇಳಿಕೊಂಡರೂ ಆಕೆ ಒಪ್ಪಿರಲಿಲ್ಲ. ಅಷ್ಟಕ್ಕೆ ಮನನೊಂದು ಪತಿ ಇಂತಹ ಕೆಲಸ ಮಾಡಿಕೊಂಡಿದ್ದಾನೆ. ಕೌಟುಂಬಿಕ ವಿಚಾರವಾಗಿ ಪತಿ-ಪತ್ನಿಯರ ನಡುವೆ ಮನಸ್ತಾಪವಾಗಿತ್ತು ಎನ್ನಲಾಗಿದೆ. ಇದೀಗ ಪತಿ ಚೇತರಿಸಿಕೊಳ್ಳುತ್ತಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಹೋದರಿ ಯುವಕನೊಂದಿಗೆ ಓಡಿ ಹೋಗಿದ್ದಕ್ಕೆ ಹುಡುಗಿ ಮಾಡಿದ್ದೇನು ಗೊತ್ತಾ?