ಜೈಪುರ: ಹೆಣ್ಣಿನ ತಾಯ್ತನ ಗೌರವಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಹೀಗಾಗಿ ರಾಜಸ್ಥಾನ್ ಹೈಕೋರ್ಟ್ ಮಹಿಳೆಯ ಮನವಿ ಮೇರೆಗೆ ಮಗು ಮಾಡಿಕೊಳ್ಳಲು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಗಂಡನಿಗೆ 15 ದಿನಗಳ ಪೆರೋಲ್ ನೀಡಿದೆ.
34 ವರ್ಷದ ಪತಿ ಕೊಲೆ ಮಾಡಿ ಜೀವಾವಧಿ ಶಿಕ್ಷೆಗೊಳಗಾಗಿ ಜೈಲು ಪಾಲಾಗಿದ್ದ. ಆದರೆ ವಿವಾಹಿತನಾಗಿದ್ದ ಆತನಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಈಗ ಪತ್ನಿ ತನ್ನ ತಾಯ್ತನ ಪೂರ್ಣವಾಗಲು ಮಗು ಬೇಕು. ಇದಕ್ಕಾಗಿ ಗಂಡನ ಜೊತೆ ಇರಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಳು.
ಅದರಂತೆ ಮಹಿಳೆಯ ಮನವಿ ಪುರಸ್ಕರಿಸಿದ ನ್ಯಾಯಾಲಯ ತಾಯ್ತನ ಪಡೆಯಲು ಗಂಡನಿಗೆ 15 ದಿನಗಳ ಕಾಲ ಪೆರೋಲ್ ಮೇಲೆ ಬಿಡುಗಡೆ ಭಾಗ್ಯ ನೀಡಿದೆ.