Publish Date: Sat, 09 Apr 2022 (09:50 IST)
Updated Date: Sat, 09 Apr 2022 (09:53 IST)
ಥಾಣೆ: ತಾನು ಸಲಿಂಗಿ ಎಂಬ ವಿಚಾರ ಮುಚ್ಚಿಟ್ಟು ವ್ಯಕ್ತಿಯೋರ್ವ ಮದುವೆಯಾಗಿ ಪತ್ನಿಗೆ ಮೋಸ ಮಾಡಿದ ಪ್ರಕರಣ ನಡೆದಿದೆ.
ಆನ್ ಲೈನ್ ಪೋರ್ಟಲ್ ಮೂಲಕ ವಧು-ವರರು ಪರಸ್ಪರ ಪರಿಚಯವಾಗಿದ್ದರು. ಕೆಲವು ಸಮಯದ ಬಳಿಕ ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದರು. ಅದರಂತೆ ಕಳೆದ ವರ್ಷ ನವಂಬರ್ ನಲ್ಲಿ ಮದುವೆಯೂ ಆಗಿತ್ತು.
ಆದರೆ ಮದುವೆ ಬಳಿಕ ಆತನ ನಿಜ ಬಣ್ಣ ಬಯಲಾಗಿತ್ತು. ಹೀಗಾಗಿ ಮಹಿಳೆ ಗಂಡನಿಂದ ಪ್ರತ್ಯೇಕವಾಗಿದ್ದರು. ಅಲ್ಲದೆ ತನಗೆ ಮೋಸ ಮಾಡಿದ ಗಂಡನ ವಿರುದ್ಧ ದೂರು ನೀಡಿದ್ದರು. ಅದರಂತೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಇದೀಗ ನ್ಯಾಯಲಯವೂ ಮಹಿಳೆಯ ಅಳಲು ಪರಿಗಣಿಸಿ ಆರೋಪಿಗೆ ಜಾಮೀನು ನಿರಾಕರಿಸಿದೆ.