Select Your Language

Notifications

webdunia
webdunia
webdunia
webdunia

ನಕಲಿ ಖಾತೆ ತೆರೆದು 150 ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ವಂಚಕ ಅರೆಸ್ಟ್

ನವದೆಹಲಿ , ಶುಕ್ರವಾರ, 8 ಏಪ್ರಿಲ್ 2022 (11:40 IST)
ನವದೆಹಲಿ: ನಕಲಿ ಸಾಮಾಜಿಕ ಖಾತೆಗಳನ್ನು ತೆರೆದು 150 ಕ್ಕೂ ಹೆಚ್ಚು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ವ್ಯಾಟ್ಸಪ್ ಮತ್ತು ಇನ್ ಸ್ಟಾಗ್ರಾಂ ಮೂಲಕ ಮಹಿಳೆಯರಿಗೆ ಕರೆ, ಸಂದೇಶ ಕಳುಹಿಸಿ ಆರೋಪಿ ಕಿರುಕುಳ ನೀಡುತ್ತಿದ್ದ. ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಬೆದರಿಕೆ ಹಾಕುತ್ತಿದ್ದ.

ಈತನ ಕಿರುಕುಳ ತಾಳಲಾರದೇ ಮಹಿಳೆಯೊಬ್ಬರು ಸೈಬರ್ ಅಧಿಕಾರಿಗಳಿಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಆತ ಇನ್ನಷ್ಟು ಮಹಿಳೆಯರಿಗೆ ಇದೇ ರೀತಿ ಮೋಸ ಮಾಡುತ್ತಿರುವುದು ಬೆಳಕಿಗೆ ಬಂತು. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುದ್ಧ : ಏರ್ ಇಂಡಿಯಾ ವಿಮಾನ ರದ್ದು!