Publish Date: Thu, 07 Apr 2022 (11:52 IST)
Updated Date: Thu, 07 Apr 2022 (09:34 IST)
ಫರೀದಾಬಾದ್: ಮದ್ಯದ ದಾಸನಾಗಿದ್ದ ಪತಿ ಕುಡಿಯಲು ಹಣ ಕೊಡಲಿಲ್ಲವೆಂದು ಪತ್ನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ.
ನಿರುದ್ಯೋಗಿಯಾಗಿದ್ದ ಪತಿ ಮದ್ಯದ ದಾಸನಾಗಿದ್ದ. ಕುಡಿಯಲು ಹಣ ಕೊಡುವಂತೆ ಪತ್ನಿಯನ್ನು ಸದಾ ಪೀಡಿಸುತ್ತಿದ್ದ. ಆದರೆ ವೈವಾಹಿಕ ಸಂಬಂಧ ಮುರಿದುಕೊಳ್ಳಲು ಇಷ್ಟಪಡದ ಪತ್ನಿ ಆತನ ಎಲ್ಲಾ ಕಿರುಕುಳವನ್ನು ಸಹಿಸಿಕೊಳ್ಳುತ್ತಿದ್ದಳು.
ಆದರೆ ಈ ಬಾರಿ ಪತಿಯ ಕಿರುಕುಳ ಮಿತಿ ಮೀರಿದ್ದು, ಪತ್ನಿ ಸ್ನಾನಕ್ಕೆ ಹೋಗಿದ್ದಾಗ ಇಲೆಕ್ಟ್ರಿಕ್ ಶಾಕ್ ನೀಡಿ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ. ಇದೀಗ ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು,ಆರೋಪಿಯನ್ನು ಬಂಧಿಸಲಾಗಿದೆ.