Publish Date: Wed, 06 Apr 2022 (11:40 IST)
Updated Date: Wed, 06 Apr 2022 (09:30 IST)
ಭೋಪಾಲ್: ತಾನು ಹಿರಿಯ ಪೊಲೀಸ್ ಅಧಿಕಾರಿಯೆಂದು ಪೊಲೀಸರಿಗೇ ವಂಚಿಲು ಹೋಗಿ ವ್ಯಕ್ತಿಯೊಬ್ಬ ಬಂಧನಕ್ಕೊಳಗಾಗಿದ್ದಾನೆ.
ಮಧ್ಯರಾತ್ರಿ ರೆಸ್ಟೋರೆಂಟ್ ಒಂದರ ಬಳಿ ನಿಂತಿದ್ದ ಇಬ್ಬರು ಯುವಕರನ್ನು ಪೊಲೀಸರು ಪ್ರಶ್ನಿಸಿದ್ದಲ್ಲದೆ, ಅವರ ನಡವಳಿಕೆಯಿಂದ ಸಂಶಯಗೊಂಡು ಬಂಧಿಸಿ ಠಾಣೆಗೆ ಕರೆತಂದಿದ್ದರು.
ಆದರೆ ಕೆಲವೇ ಕ್ಷಣಗಳಲ್ಲಿ ತಾನು ಸಿಎಂ ನಿವಾಸದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿ, ನೆಟ್ ವರ್ಕ್ ಸಮಸ್ಯೆಯಿಂದಾಗಿ ಬೇರೊಂದು ನಂಬರ್ ನಿಂದ ಕರೆ ಮಾಡುತ್ತಿದ್ದೇನೆ, ಕೂಡಲೇ ಆ ಇಬ್ಬರು ಹುಡುಗರನ್ನು ರಿಲೀಸ್ ಮಾಡಿ ಎಂದು ವ್ಯಕ್ತಿಯೊಬ್ಬ ಕರೆ ಮಾಡುತ್ತಾನೆ. ಆದರೆ ಆತನ ಕರೆಯಿಂದ ಸಂಶಯಗೊಂಡ ಪೊಲೀಸರು ಆ ನಂಬರ್ ಬಗ್ಗೆ ವಿಚಾರಣೆ ನಡೆಸಿದಾಗ ಇದು ಫೇಕ್ ಕಾಲ್ ಎಂಬುದು ಗೊತ್ತಾಗುತ್ತದೆ. ಅದರಂತೆ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಪೊಲೀಸರು ಬಂಧಿಸಿರುತ್ತಾರೆ.