Select Your Language

Notifications

webdunia
webdunia
webdunia
webdunia

ಕೈಕೊಟ್ಟ ಪ್ರಿಯಕರ: ಆತ್ಮಹತ್ಯೆಗೆ ಶರಣಾದ ಗರ್ಭಿಣಿ ಯುವತಿ

ಕೈಕೊಟ್ಟ ಪ್ರಿಯಕರ: ಆತ್ಮಹತ್ಯೆಗೆ ಶರಣಾದ ಗರ್ಭಿಣಿ ಯುವತಿ
ಚೆನ್ನೈ , ಶುಕ್ರವಾರ, 8 ಏಪ್ರಿಲ್ 2022 (09:56 IST)
ಚೆನ್ನೈ: ಪ್ರೀತಿ ಮಾಡುವಾಗ ಜಾತಿ ಅಡ್ಡಬರಲಿಲ್ಲ. ಇನ್ನೇನು ಮದುವೆಯಾಗಬೇಕು ಎನ್ನುವ ಹಂತದಲ್ಲಿ ಜಾತಿ ನೆಪ ಹೂಡಿ ಯುವಕನೊಬ್ಬ ಪ್ರೀತಿಸಿದ ಹುಡುಗಿಗೆ ಕೈಕೊಟ್ಟಿದ್ದಾನೆ. ಪರಿಣಾಮ ಗರ್ಭಿಣಿಯಾಗಿದ್ದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ತಮಿಳುನಾಡಿನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಪ್ರೀತಿಸಿದ ಹುಡುಗ ಮದುವೆಯಾಗಲು ನಿರಾಕರಿಸಿದ್ದಕ್ಕೆ ಮನನೊಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಗರ್ಭಿಣಿಯಾಗಿದ್ದ ವಿಚಾರವನ್ನು ಮನೆಯವರಿಂದಲೂ ಮುಚ್ಚಿಟ್ಟಿದ್ದಳು.

ಇದೀಗ ಯುವತಿಯ ಮನೆಯವರು ಯುವಕನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತೆಯಾಗಿದ್ದಾಗ ಅತ್ಯಾಚಾರವಾಗಿತ್ತೆಂದು 27 ವರ್ಷಗಳ ಬಳಿಕ ಕೇಸ್ ದಾಖಲಿಸಿದ ಮಹಿಳೆ!