ನವದೆಹಲಿ: ವರನ ಪಕ್ಕ ಕೂತಿದ್ದ ಗೆಳೆಯ ಹಾರದಿಂದ ಹಣ ಕದಿಯುವ ದೃಶ್ಯಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆ ಎಂದರೆ ವರನ ಅಕ್ಕ ಪಕ್ಕ ಗೆಳೆಯರು ಕೂತಿರುವುದು ಸಾಮಾನ್ಯ. ಅದೇ ರೀತಿ ಪಕ್ಕ ಕುಳಿತಿದ್ದ ಗೆಳೆಯ ಮೆತ್ತಗೆ ವರನಿಗೆ ಹಾಕಿದ್ದ ಹಾರದಲ್ಲಿದ್ದ ನೋಟುಗಳನ್ನು ಎಗರಿಸುತ್ತಾನೆ.
ವರ ನೋಡುವಾಗ ಅಮಾಯಕನಂತೆ ಪೋಸ್ ಕೊಡುತ್ತಾನೆ. ಈ ದೃಶ್ಯಗಳನ್ನು ನೋಡಿದ ನೆಟ್ಟಿಗರು ಖತರ್ನಾಕ್ ಗೆಳೆಯ ಎಂದು ತಮಾಷೆ ಮಾಡಿದ್ದಾರೆ.