Select Your Language

Notifications

webdunia
webdunia
webdunia
webdunia

ಎಸಿ ಸ್ಫೋಟಕ್ಕೆ ಒಂದೇ ಮನೆಯ ನಾಲ್ವರು ಸಾವು

ಎಸಿ ಸ್ಫೋಟಕ್ಕೆ ಒಂದೇ ಮನೆಯ ನಾಲ್ವರು ಸಾವು
bangalore , ಶುಕ್ರವಾರ, 8 ಏಪ್ರಿಲ್ 2022 (16:52 IST)
ಎಸಿ ಸ್ಫೋಟಗೊಂಡು ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಮರಿಯಮ್ಮನಹಳ್ಳಿಯ ರಾಘವೇಂದ್ರಶೆಟ್ಟಿ ಮನೆಯಲ್ಲಿ ನಡೆದಿದೆ. ಎಸಿ ಸ್ಫೋಟದಿಂದ ಮನೆಯಲ್ಲಿದ್ದ ಪತಿ, ಪತ್ನಿ, ಇಬ್ಬರು ಮಕ್ಕಳು ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಎಸಿ ಸ್ಫೋಟಗೊಂಡು ದುರ್ಘಟನೆ ನಡೆದಿದೆ ಎನ್ನಲಾಗಿದೆ. ವೆಂಕಟ್ ಪ್ರಶಾಂತ್, ಪತ್ನಿ ಡಿ.ಚಂದ್ರಕಲಾ, ಮಕ್ಕಳಾದ H.A.ಅರ್ದ್ವಿಕ್, ಪ್ರೇರಣಾ ಮೃತಪಟ್ಟಿದ್ದಾರೆ. ಎಸಿ ಸ್ಫೋಟಗೊಂಡು ಇಡೀ ಮನೆ ಧಗಧಗನೆ ಹೊತ್ತಿ ಉರಿದಿದೆ. ಸ್ಥಳಕ್ಕೆ ಮರಿಯಮ್ಮನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ತಹಸೀಲ್ದಾರ್ ವಿಶ್ವಜಿಜ್ ಮೆಹ್ತಾ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದಿದ್ದಾರೆ. ಪದ್ಮಶ್ರೀ ಪುರಸ್ಕೃತ ಮಾತಾ ಮಂಜಮ್ಮ ಜೋಗತಿ ಅವರೂ ಘಟನೆ ಸ್ಥಳದಲ್ಲಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಿಗೆ ಸಿಲುಕಿದ್ದ ಕರಡಿ ರಕ್ಷಣೆ