Select Your Language

Notifications

webdunia
webdunia
webdunia
webdunia

ಪತ್ನಿ ಕೊಂದು ಆಂಧ್ರಕ್ಕೆ ಎಸ್ಕೇಪ್! ಮುಂದೇನಾಯ್ತು?

ಪತ್ನಿ ಕೊಂದು ಆಂಧ್ರಕ್ಕೆ ಎಸ್ಕೇಪ್! ಮುಂದೇನಾಯ್ತು?
ಬೆಂಗಳೂರು , ಭಾನುವಾರ, 28 ನವೆಂಬರ್ 2021 (08:18 IST)
ಬೆಂಗಳೂರು : ಹೆಂಡತಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಪತ್ನಿಯನ್ನು ಕೊಂದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಆಯೇಷಾ(45) ಮೃತ ಮಹಿಳೆ. ಹೆಂಡತಿಯನ್ನು ಕೊಲೆ ಮಾಡಿದ್ದ ಪತಿ ನಿಸಾರ್(50) ಆಂಧ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ನಿಸಾರ್ ಮತ್ತು ಆಯೇಷಾ ದಂಪತಿ ಬೆಂಗಳೂರಿನ ರಾಜೇಂದ್ರನಗರದಲ್ಲಿ ವಾಸವಿದ್ದರು. ವಯಸ್ಸು ಐವತ್ತಾದರು ನಿಸಾರ್ ಪತ್ನಿ ಶೀಲ ಶಂಕಿಸುತ್ತಿದ್ದ. ನವೆಂಬರ್ 19ರಂದು ಪತ್ನಿಯ ಹತ್ಯೆಗೆ ಪ್ಲಾನ್ ಮಾಡಿಕೊಂಡು ಆಕೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾನೆ. ಆದ್ರೆ ಕೊನೆಗೆ ಬೆಂಗಳೂರಿನಿಂದ ತಪ್ಪಿಸಿಕೊಂಡು ಹೋಗಿ ಆಂಧ್ರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಆರೋಪಿ ನಿಸಾರ್ ಮಸೀದಿಗಳಲ್ಲಿ ಚಂದಾ ವಸೂಲಿ ಮಾಡಿ ಮದರಸಗೆ ನೀಡೊ ಕೆಲಸ ಮಾಡುತ್ತಿದ್ದ. ಆತ ಪತ್ನಿ ಶೀಲ ಶಂಕಿಸಿ ಆಗಾಗ ಜಗಳ ಮಾಡ್ತಿದ್ದ. ಮನೆಯಲ್ಲೂ ಕೂಡ ಹೆಚ್ಚಾಗಿ ಇರ್ತಾ ಇರ್ಲಿಲ್ಲ. ನವಂಬರ್ 19 ರಂದು ಹೆಂಡತಿಯನ್ನ ಕೊಲ್ಲಲೇಬೇಕೆಂದು ರೆಡಿಯಾಗಿ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಖರೀದಿಸಿಕೊಂಡು ಮನೆಗೆ ಬಂದಿದ್ದ.
ಅಜ್ಜಿ ಆಯೇಷಾ ಜೊತೆ ಮಗಳ ಪುಟ್ಟ ಮಗು ವಾಸವಾಗಿತ್ತು. ಪಾಪು ಮನೆಯಲ್ಲಿದ್ರೆ ಪತ್ನಿ ಕಥೆ ಮುಗಿಸೋದು ಕಷ್ಟ ಎಂದು ಮೊದಲಿಗೆ ಅಳಿಯನಿಗೆ ಕರೆ ಮಾಡಿ ಪಾಪುವನ್ನ ನಾನು ನೋಡಬೇಕು ಅನ್ನಿಸ್ತಿದೆ ನೀಲಸಂದ್ರ ಸಂಬಂಧಿ ಮನೆಗೆ ಕರೆತರುವಂತೆ ಹೇಳಿದ್ದ. ಅದರಂತೆ ನವಂಬರ್ 19 ರ ಶುಕ್ರವಾರ ಆರೋಪಿ ನಿಸಾರ್ ಅಳಿಯ ಪಾಪು ಕರೆದು ನೀಲಸಂದ್ರ ಕಡೆ ತೆರಳಿದ್ದ. ಮನೆಯಲ್ಲಿದ್ದ ಮಗ ಮತ್ತು ಸೊಸೆ ಕೂಡ ಕೆಲಸಕ್ಕೆ ತೆರಳಿದ್ರು. ಈ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿ ಸಂಜೆ 3 ಗಂಟೆಗೆ ತನ್ನ ಮನೆಗೆ ಬಂದಿದ್ದ. ಬಂದು ಪತ್ನಿ ಬಳಿ ಐದು ಕೆ.ಜಿಯ ಚಿಕ್ಕ ಸಿಲಿಂಡರ್ ಕೊಡು ಅಂತಾ ಹೊರಗಿನಿಂದಲೇ ಕೇಳಿದ್ದಾನೆ. ಆಗ ಪತ್ನಿ ಸಿಲಂಡರ್ ತರಲು ಹೋದಾಗ ಆಕೆ ಮೇಲೆ ಪೆಟ್ರೋಲ್ ಸುರಿದು ತಕ್ಷಣ ಡೋರ್ ಲಾಕ್ ಮಾಡಿಕೊಂಡಿದ್ದಾನೆ. ಬಳಿಕ ಡೋರ್ ಪಕ್ಕದಲ್ಲೇ ಇದ್ದ ಕಿಟಕಿ ಗಾಜನ್ನು ಒಡೆದಿದ್ದಾನೆ. ಈ ವೇಳೆ ಒಡೆದ ಗಾಜಿನ ಚೂರು ಆತನ ಕೈಯನ್ನ ಸೀಳಿದೆ. ರಕ್ತ ಹರಿತಿದ್ರು ಕಿಟಕಿಯಿಂದಲೇ ಬೆಂಕಿ ಕಡ್ಡಿ ಗೀಚಿ ಎಸೆದಿದ್ದಾನೆ.
ತಕ್ಷಣ ಬೆಂಕಿ ಸ್ಫೋಟಗೊಂಡಿದೆ. ಬಾಗಿಲು ಒಡೆದಿದೆ. ಈ ಪರಿಣಾಮ ಕಿಟಕಿ ಬಳಿ ಇದ್ದ ಈತನ ಮುಖವನ್ನೂ ಬೆಂಕಿ ಸುಟ್ಟಿದೆ. ಅಕ್ಕ ಪಕ್ಕದವರು ಬರುವಷ್ಟರಲ್ಲಿ ಆರೋಪಿ ನಿಸಾರ್ ಎಸ್ಕೇಪ್ ಆಗಿದ್ದಾನೆ. ಬೆಂಕಿ ಆರಿಸಿದ ನೆರೆಹೊರೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಉಸಿರಾಡ್ತಿದ್ದ ಆಯೇಷಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಪೊಲೀಸರು ಶುಕ್ರವಾರ ಸಂಜೆ ಹೊತ್ತಿಗೆ ಆರೋಪಿ ಪತ್ತೆಗೆ ಟೀಂ ರೆಡಿ ಮಾಡಿ ಕಾರ್ಯಾಚರಣೆ ಶುರು ಮಾಡಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ವರುಣನ ಆರ್ಭಟಕ್ಕೆ ಆಂಧ್ರ, ತಮಿಳುನಾಡು ತತ್ತರ!