Select Your Language

Notifications

webdunia
webdunia
webdunia
webdunia

ರಾಜಕಾಲುವೆಯಲ್ಲಿ ಒತುವರಿ ಮಾಡಿದರೆ ಕಠಿಣ ಕ್ರಮ

ರಾಜಕಾಲುವೆಯಲ್ಲಿ ಒತುವರಿ ಮಾಡಿದರೆ ಕಠಿಣ ಕ್ರಮ
ಬೆಂಗಳೂರು , ಶುಕ್ರವಾರ, 26 ನವೆಂಬರ್ 2021 (18:13 IST)
ರಾಜಾಕಾಲುವೆ ಒತ್ತುವರಿಯಿಂದ ಮನೆಗಳಿಗೆ ಮಳೆ ನೀರು ನುಗ್ಗಿ ನಗರದಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ರಾಜಾಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಖಡಕ್ ಸೂಚನೆ ನೀಡಿದೆ.‌ ಈಗ ರಾಜಕಾಲುವೆ ಒತ್ತುವರಿ ಮಾಡಿ ಮನೆ ಕಟ್ಟಿದವರಿಗೆ ಢವಢವ ಶುರುವಾಗಿದೆ.ರಾಜಾಧಾನಿ ಬೆಂಗಳೂರಿನಲ್ಲಿ ಕೆರೆ ಒತ್ತುವರಿ, ರಾಜಾಕಾಲುವೆ ಒತ್ತುವರಿ ಸಮಸ್ಯೆ ಇವತ್ತು ನಿನ್ನೆಯದಲ್ಲ. ಸಮಸ್ಯೆ ಕಣ್ಣಿಗೆ ಕಂಡಿದ್ರೂ ಸರ್ಕಾರಗಳು ಕುರುಡಾಗಿತ್ತು. ಕಳೆದ ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಇಡೀ ಬೆಂಗಳೂರು ಉತ್ತರವೇ ತತ್ತರಿಸಿ ಹೋಗಿತ್ತು. ಕೆಲವು ಕಡೆ ಕೆರೆ ನೀರು ಮನೆ, ಅಪಾರ್ಟ್ಮೆಂಟ್, ಅಂಗಡಿ – ಮುಂಗಟ್ಟುಗಳಿಗೆ ನುಗ್ಗಿದ್ರೆ, ಇನ್ನು ಕೆಲವು ಕಡೆ ಕೆರೆ ಕೋಡಿ ತುಂಬಿ ಅದ್ವಾನವಾಗಿತ್ತು. ಬೆಂಗಳೂರು ಉತ್ತರ ಭಾಗದ ಜನರು ಅಕ್ಷರಶಃ ನರಕಯಾತನೆ ಅನುಭವಿಸಿದ್ದು, ಸರ್ಕಾರ ಮತ್ತು ಬಿಬಿಎಂಪಿ ಗೆ ಹಿಡಿಶಾಪ ಹಾಕಿದ್ರು. ಇದ್ರ ಬೆನ್ನಲ್ಲೆ ಎಚ್ಚೆತ್ತ ಸರ್ಕಾರ ಈಗ ಒತ್ತುವರಿಯಾದ ರಾಜಾಕಾಲುವೆ ತೆರವುಗೊಳಿಸಲು ಸೂಚನೆ ನೀಡಿದೆ.
 
ಸರ್ಕಾರದ ಒತ್ತುವರಿ ಲೀಸ್ಟ್ ನಲ್ಲಿ ನಗರದ ಒಟ್ಟು 356 ವಾಸದ ಮನೆಗಳಿದ್ದು, 959 ಕಡೆಗಳಲ್ಲಿ ಖಾಲಿಜಾಗಕ್ಕೆ ಒತ್ತುವರಿಗೊಳಿಸಿ ಬೇಲಿ ಹಾಕಿರೋದು ಗೊತ್ತಾಗಿದೆ. ಇನ್ನು ಒತ್ತುವರಿ ಜಾಗದಲ್ಲಿ 35 ವಾಣಿಜ್ಯ ಕೈಗಾರಿಕಾ ಕಟ್ಟಡಗಳು ನಿರ್ಮಾಣವಾಗಿದ್ದು, 244 ಕಡೆಗಳಲ್ಲಿ ರಾಜಕಾಲುವೆ ಜಾಗ ಒತ್ತುವರಿ ಮಾಡಿ ಕಟ್ಟಡ ಕಟ್ಟಲಾಗಿದೆ ಅಂತಾ ಗುರುತಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸ ಪ್ರಿಯರಿಗೆ IRCTC ಗುಡ್ ನ್ಯೂಸ್