Select Your Language

Notifications

webdunia
webdunia
webdunia
webdunia

ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್!

ಮತ್ತೊಂದು ಕಾಲೇಜಿನಲ್ಲಿ ಕೊರೊನಾ ಬ್ಲಾಸ್ಟ್!
ಬೆಂಗಳೂರು , ಶನಿವಾರ, 27 ನವೆಂಬರ್ 2021 (12:19 IST)
ಬೆಂಗಳೂರು : ನಗರದ ಕಾಲೇಜೊಂದರಲ್ಲಿ 12 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಗಮನಾರ್ಹ ವಿಚಾರವೆಂದರೆ 12 ವಿದ್ಯಾರ್ಥಿಗಳಲ್ಲಿ ಈಗಾಗಲೇ 11 ವಿದ್ಯಾರ್ಥಿಗಳು ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 9 ಮಂದಿಗೆ ಕೊರೊನಾ ಗುಣಲಕ್ಷಣಗಳು ಕಂಡುಬಂದಿದೆ.
ಆನೇಕಲ್ನ ಮರಸೂರಿನಲ್ಲಿ ಇರುವ ಸ್ಫೂರ್ತಿ ಕಾಲೇಜಿನ 12 ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾಗಿದೆ. ಇನ್ನೂ ಈ ಎಲ್ಲಾ ವಿದ್ಯಾರ್ಥಿಗಳು ಮೊದಲ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳಾಗಿದ್ದಾರೆ. ಜೂನ್ನಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಲಸಿಕೆ ಪಡೆದಿರಲಿಲ್ಲ ಎಂದು ತಿಳಿಸಲಾಗಿದೆ. 
ಒಟ್ಟು 134 ವಿದ್ಯಾರ್ಥಿಗಳಿಗೆ ಟೆಸ್ಟ್ ಮಾಡಲಾಗಿತ್ತು. ಅದರಲ್ಲಿ 12 ವಿದ್ಯಾರ್ಥಿಗಳಿಗೆ ಪಾಸಿಟಿವ್ ದೃಢಪಟ್ಟಿದ್ದು, ಇದೀಗ ಆ ವಿದ್ಯಾರ್ಥಿಗಳನ್ನ ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಮಾಷೆಗಾಗಿ ಮಾಡಿದ ಆಟ ಯುವಕನ ಪ್ರಾಣಕ್ಕೆ ಎರವಾಯ್ತು